ಮುದಗಲ್‌ನಲ್ಲಿ ಪುರಸಭೆ ಮುಖ್ಯಾಧಿಕಾರಿ ಪ್ರವೀಣಕುಮಾರ ಬೋಗಾರಗೆ 23ನೇ ವಾರ್ಡ್ ನಿವಾಸಿಗಳು ಮನವಿ ಸಲ್ಲಿಸಿದರು. ಪ್ರಮುಖರಾದ ಬಸಮ್ಮ, ವಿಜಯಲಕ್ಷ್ಮೀ, ಭಾರತಿ, ಸಾವಿತ್ರಿ, ನೀಲಮ್ಮ ಇತರರಿದ್ದರು. 
ಜಿಲ್ಲೆ

ಸಮರ್ಪಕ ನೀರು ಸರಬರಾಜು ಮಾಡಿ

ಗಾಯತ್ರಿ ಮಾಲಿಪಾಟೀಲ್

ಮುದಗಲ್: ಪಟ್ಟಣದ 23ನೇ ವಾರ್ಡ್‌ನ ಸೋಮವಾರಪೇಟೆಯಲ್ಲಿ ನೀರಿನ ತೊಂದರೆಯಾಗಿದ್ದು, ಪೂರೈಕೆಗೆ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಸ್ಥಳೀಯ ಮಹಿಳೆಯರು ಶನಿವಾರ ಪುರಸಭೆ ಮುಖ್ಯಾಧಿಕಾರಿ ಪ್ರವೀಣಕುಮಾರ ಬೋಗಾರಗೆ ಮನವಿ ಸಲ್ಲಿಸಿದರು. ಕಳೆದ 15 ದಿನಗಳಿಂದ ವಾರ್ಡ್‌ಗೆ ಸಮರ್ಪಕ ನೀರು ಪೂರೈಕೆಯಾಗುತ್ತಿಲ್ಲ. ನೆರೆ ವಾರ್ಡ್‌ಗಳಿಗೆ ತೆರಳಿ ನೀರು ತರಬೇಕಾಗಿದೆ. ವಿವಿಧ ವಾರ್ಡ್‌ಗಳಲ್ಲಿ ಬೋರ್‌ವೆಲ್ ಕೊರೆಸಿ ದಿನ ಬಳಕೆ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ, 23ನೇ ವಾರ್ಡ್‌ನಲ್ಲಿ ಬೋರ್‌ವೆಲ್ ಕೊರೆಸಿಲ್ಲ. ಆದ್ದರಿಂದ ನೀರಿನ ಸಮಸ್ಯೆ ಉಂಟಾಗಿದೆ. ಕೂಡಲೇ ನೀರು ಪೂರೈಸಬೇಕೆಂದು ಆಗ್ರಹಿಸಿದರು. ಪ್ರಮುಖರಾದ ಬಸಮ್ಮ, ವಿಜಯಲಕ್ಷ್ಮೀ, ಭಾರತಿ, ಸಾವಿತ್ರಿ, ನೀಲಮ್ಮ, ಲಕ್ಷ್ಮಮ್ಮ, ರಾಚಪ್ಪ ಗಬ್ಬೂರು ಇತರರಿದ್ದರು.