ರಾಯಚೂರಿನಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿಗೆ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದಿಂದ ಮನವಿ ಸಲ್ಲಿಸಲಾಯಿತು. ಸಂಘದ ಜಿಲ್ಲಾಧ್ಯಕ್ಷ ಕೃಷ್ಣ ಶಾವಂತಗೇರಾ, ಪ್ರಮುಖರಾದ ಶಂಕರಗೌಡ ಪಾಟೀಲ್, ಭೀಮೇಶ, ಮಲ್ಲೇಶ ಭಂಡಾರಿ, ಚಂದ್ರಶೇಖರ ರೆಡ್ಡಿ, ಆಂಜನೇಯ, ರಾಜವರ್ಧನ ರೆಡ್ಡಿ, ಮಲ್ಲಿಕಾರ್ಜುನ, ಮಹಾದೇವ ಪಾಟೀಲ್, ಯಂಕಪ್ಪ ಪಿರಂಗಿ ಇತರರಿದ್ದರು. 
ಜಿಲ್ಲೆ

ಸರ್ಕಾರಿ ನೌಕರರಿಗೆ ಸೂಕ್ತ ಭದ್ರತೆ ಒದಗಿಸಿ

ರಾಯಚೂರು: ಸರ್ಕಾರಿ ನೌಕರರಿಗೆ ಭದ್ರತೆ ಒದಗಿಸುವಂತೆ ಒತ್ತಾಯಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕ ಶುಕ್ರವಾರ ಪ್ರತಿಭಟನೆ ನಡೆಸಿ, ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿಗೆ ಮನವಿ ಸಲ್ಲಿಸಿತು.

ಜಿಲ್ಲೆಯ ಮಾನ್ವಿಯಲ್ಲಿ ಮೇ 22 ರಂದು ಜೋಳ ಖರೀದಿ ಸಂಬಂಧ ರೈತರು ಹೋರಾಟ ಮಾಡುತ್ತಿರುವಾಗ ಜಿಲ್ಲಾಧಿಕಾರಿ ಆದೇಶದಂತೆ ಆಹಾರ ಇಲಾಖೆ ಉಪನಿರ್ದೇಶಕ ಕೃಷ್ಣ ಶಾವಂತಗೇರಾ ಅವರು ಪ್ರತಿಭಟನಾ ಸ್ಥಳಕ್ಕೆ ತೆರಳಿದ್ದಾರೆ. ಮನವಿ ಸ್ವೀಕರಿಸುವ ಸಂದರ್ಭದಲ್ಲಿ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಸಾರ್ವಜನಿಕರ ಎದುರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಅಲ್ಲದೇ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ನೌಕರರ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ನೌಕರರು ಸರ್ಕಾರದ ನಿಯಮಗಳಂತೆ ಕೆಲಸ ಮಾಡುತ್ತಿದ್ದರೂ ಕೆಲವು ಸಂಘಟನೆಗಳವರು ಅನಗತ್ಯವಾಗಿ ಕಿರುಕುಳ ನೀಡುತ್ತಿದ್ದಾರೆ. ಜಿಲ್ಲೆಯಲ್ಲಿ ಪದೇಪದೆ ಇಂಥ ಘಟನೆಗಳು ನಡೆಯುತ್ತಿದ್ದು, ಸೂಕ್ತ ಕ್ರಮಕೈಗೊಳ್ಳಬೇಕು. ಸರ್ಕಾರಿ ನೌಕರರು ನಿರ್ಭಯದಿಂದ ಕೆಲಸ ಮಾಡಲು ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಸಂಘದ ಜಿಲ್ಲಾಧ್ಯಕ್ಷ ಕೃಷ್ಣ ಶಾವಂತಗೇರಾ, ಪ್ರಮುಖರಾದ ಶಂಕರಗೌಡ ಪಾಟೀಲ್, ಭೀಮೇಶ, ಮಲ್ಲೇಶ ಭಂಡಾರಿ, ಚಂದ್ರಶೇಖರ ರೆಡ್ಡಿ, ಆಂಜನೇಯ, ರಾಜವರ್ಧನ ರೆಡ್ಡಿ, ಮಲ್ಲಿಕಾರ್ಜುನ, ಮಹಾದೇವ ಪಾಟೀಲ್, ಯಂಕಪ್ಪ ಪಿರಂಗಿ, ಹನುಮಂತ್ರಾಯ, ಧನಲಕ್ಷ್ಮೀ, ಛಾಯಾದೇವಿ, ಮಹೇಶ್ವರಿ, ವೈ.ಕೆ.ಯಶೋದಾ ಇತರರಿದ್ದರು.