ಜಿಲ್ಲೆ

ಸಮರ್ಪಕ ರಸ್ತೆ, ಚರಂಡಿ ವ್ಯವಸ್ಥೆ ಕಲ್ಪಿಸಿ

ಬಸವರಾಜ ವೀರಪ್ಪ ಗರಗ

ನವಲಗುಂದ: ಸಮರ್ಪಕ ರಸ್ತೆ ಹಾಗೂ ಚರಂಡಿ ವ್ಯವಸ್ಥೆ ಕಲ್ಪಿಸಲು ಒತ್ತಾಯಿಸಿ ನವಲಗುಂದ ಪಟ್ಟಣದ 5 ಮತ್ತು 6ನೇ ವಾರ್ಡ್ ವ್ಯಾಪ್ತಿಯ ಗೌಡರ ಪ್ಲಾಟ್, ಗುಳೇದ ಪ್ಲಾಟ್ ಹಾಗೂ ಹೆಬಸೂರ ಗ್ರಾಮದ ನಿವಾಸಿಗಳು ಪುರಸಭೆ ಲೆಕ್ಕಾಧಿಕಾರಿ ಶೋಭಾ ಹೆಬ್ಬಳ್ಳಿ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
ಸಿದ್ದಪ್ಪ ಜನ್ನರ, ಪ್ರಕಾಶ ನಾಗರಹಳ್ಳಿ, ಆರ್.ಬಿ. ಮದಗುಣಕಿ, ಮಂಜುಳಾ ನಾಗರಹಳ್ಳಿ, ಕೆ.ಎನ್. ನದಾಫ, ಲಕ್ಷ್ಮವ್ವ ನಾಯ್ಕರ, ಆನಂದ ನಾಯ್ಕ, ಇತರರಿದ್ದರು.