ಬೀಳಗಿ: ಗಿರಿಸಾಗರದಲ್ಲಿ ಪಿಆರ್‌ಒ ಮೇಲೆ ಹಲ್ಲೆ ಮಾಡಿದ ಗ್ರಾಮದ ಯಂಕಪ್ಪ ಕುಶಾಲಪ್ಪ ವಾಲಿಕಾರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಪಿಆರ್‌ಒಗಳು ತಹಸೀಲ್ದಾರ್ ಸುಹಾಸ ಇಂಗಳೆ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಗಿರಿಸಾಗರ ಗ್ರಾಮದ ಜಮೀನುಗಳಿಗೆ ಗುರುವಾರ ಪಿಆರ್‌ಒಗಳು ಭೇಟಿ ನೀಡಿ ಬೆಳೆಗಳ ಮಾಹಿತಿ ಪಡೆಯಲು ತೆರಳಿದ್ದಾರೆ. ರೈತ ಯಂಕಪ್ಪ ಅವರ 117/1ಬ ಕ್ಷೇತ್ರ 2.30 ಗುಂಟೆ ಜಮೀನಿನಲ್ಲಿ ಬೆಳೆದ ಗೋವಿನಜೋಳ ಬೆಳೆಯನ್ನು ಪಿಆರ್‌ಒಗಳು ನಮೂದಿಸಿಕೊಂಡಿದಾರೆ. ಆಗ ಯಂಕಪ್ಪನು ಪಿಆರ್‌ಗಳಿಗೆ ತೊಗರಿ ಬೆಳೆ ಮತ್ತು ಈರುಳ್ಳಿ ಬೆಳೆ ನಮೂದಿಸಬೇಕೆಂದು ತಿಳಿಸಿದ್ದು, ಇದಕ್ಕೆ ನಿರಾಕರಿಸಿದಾಗ ಪಿಆರ್‌ಒಗಳ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಪಿಆರ್‌ಒಗಳು ತಿಳಿಸಿದ್ದಾರೆ. ಕೂಡಲೇ ಸರ್ಕಾರ ಪಿಆರ್‌ಒಗಳ ರಕ್ಷಣೆಗೆ ಮುಂದಾಗಬೇಕೆಂದು ಒತ್ತಾಯಿಸಿದ್ದಾರೆ.
ಪಿಆರ್‌ಒಗಳಾದ ಹಣಮಂತ ಎಂ. ಗಾಮಾ, ವಿಠ್ಠಲ ಎಚ್. ಪೂಜಾರಿ, ಮಹಾಂತೇಶ ವಾಲಿಕಾರ, ವೈ.ಎಂ. ಮೇಟಿ, ರೇಣುಕಾ ಕಾಡಪಗೋಳ, ರಾಜು ಕೆಂಬಾವಿ, ಸತೀಶ ಗಿರಣಿ, ಯಾಸೀನ್ ನಿರಲಕೇರಿ ಇತರರಿದ್ದರು.