ಚುನಾವಣಾ ಕರ್ತವ್ಯಕ್ಕೆ ಹಾಜರಾಗುವ ಅಧಿಕಾರಿ ನೌಕರರಿಗೆ ಸೂಕ್ತ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ಸಾಗರ ತಾಲೂಕು ಸರ್ಕಾರಿ ನೌಕರರ ಸಂಘದಿಂದ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಜಿ.ಪರಮೇಶ್ವರಪ್ಪ, ಸೈಯದ್ ಕಲಿಮುಲ್ಲಾ, ರಾಘವೇಂದ್ರ ಕುಮಾರ್, ಲಕ್ಷ್ಮಣ್ ನಾಯ್ಕ, ಮಾಲತೇಶ್ ಇದ್ದರು.  
ಜಿಲ್ಲೆ

ಚುನಾವಣಾ ಸಿಬ್ಬಂದಿಗೆ ಸೂಕ್ತ ಸೌಲಭ್ಯ ಒದಗಿಸಿ

ಸಾಗರ: ಚುನಾವಣಾ ಕರ್ತವ್ಯಕ್ಕೆ ಹಾಜರಾಗುವ ಸಿಬ್ಬಂದಿಗೆ ಸೂಕ್ತ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ತಾಲೂಕು ಸರ್ಕಾರಿ ನೌಕರರ ಸಂಘದಿಂದ ಶನಿವಾರ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಚುನಾವಣಾ ಕರ್ತವ್ಯಕ್ಕೆ ಬೇರೆ ಬೇರೆ ತಾಲೂಕುಗಳಿಂದ ಆಗಮಿಸುವ ಸಿಬ್ಬಂದಿ ಪ್ರತಿ ಬಾರಿ ಸೂಕ್ತ ಮೂಲಸೌಕರ್ಯ ಇಲ್ಲ ಎಂದು ದೂರುತ್ತಾರೆ. ಇದರಿಂದ ತಾಲೂಕು ಆಡಳಿತಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ತಾಲೂಕು ಸಂಘದ ಅಧ್ಯಕ್ಷ ಜಿ.ಪರಮೇಶ್ವರಪ್ಪ ಬೇಸರ ವ್ಯಕ್ತಪಡಿಸಿದರು.
ಮಹಾಗಣಪತಿ ರಥೋತ್ಸವ ಅತ್ಯಂತ ಯಶಸ್ವಿಯಾಗಿ ನಡೆಯಲು ಎಲ್ಲರ ಸಹಕಾರ ಸ್ಮರಣೀಯ. ಅನೇಕ ವರ್ಷಗಳಿಂದ ಸರ್ಕಾರಿ ನೌಕರರ ಸಂಘ ಗಣಪತಿ ಜಾತ್ರೆ ಸಂದರ್ಭದಲ್ಲಿ ಒಂದು ದಿನದ ಅನ್ನಸಂತರ್ಪಣೆ ವೆಚ್ಚ ನೀಡುತ್ತಿದೆ. ಸರ್ಕಾರಿ ನೌಕರರ ಸಂಘ ಸಾಮಾಜಿಕ ಚಟುವಟಿಕೆಗಳಿಗೂ ಕೊಡುಗೆ ನೀಡುತ್ತಾ ಬಂದಿದೆ ಎಂದು ತಿಳಿಸಿದರು.
ಉಪವಿಭಾಗಾಧಿಕಾರಿ ಆರ್.ಯತೀಶ್, ತಹಸೀಲ್ದಾರ್ ಸೈಯದ್ ಕಲಿಮುಲ್ಲಾ, ಸರ್ಕಾರಿ ನೌಕರರ ಸಂಘದ ರಾಘವೇಂದ್ರ ಕುಮಾರ್, ಲಕ್ಷ್ಮಣ್ ನಾಯ್ಕ, ಮಾಲತೇಶ್, ವೈ.ಮೋಹನ್, ಕೆ.ಜಗನ್ನಾಥ್, ಎಲ್.ಎಂ.ಹೆಗಡೆ, ಲಕ್ಷ್ಮಿ ಭಾಗವತ್, ಸೋಮಪ್ಪ, ಸುನೀಲ್ ಕುಮಾರ್, ಜಿ.ಬಸವರಾಜ್ ಇದ್ದರು.