ಜಿಲ್ಲೆ

ವಸತಿ ರಹಿತರಿಗೆ ನಿವೇಶನ ಒದಗಿಸಿ

ಜಿ.ಹೆಚ್. ಧನ್ಯಕುಮಾರ್

ಕಳಸ: ನಿವೇಶನ ರಹಿತರಿಗೆ ನಿವೇಶನ ನೀಡಬೇಕು ಎಂದು ಒತ್ತಾಯಿಸಿ ನಿವೇಶನ ರಹಿತರು ಹೊರನಾಡು ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿದರು.
ಸಿಪಿಐ ಮುಖಂಡ ಲಕ್ಷ್ಮಣಾಚಾರ್ ಮಾತನಾಡಿ, ಹೊರನಾಡು ಗ್ರಾಪಂನಲ್ಲಿ ಬಹಳ ಹಿಂದೆಯೇ ವಸತಿ ರಹಿತರ ಪಟ್ಟಿ ಮಾಡಲಾಗಿದೆ. ಆದರೆ ಈಗ ಬಹಳಷ್ಟು ನಿವೇಶನ ರಹಿತರ ಹೆಸರು ಸೇರ್ಪಡೆ ಆಗಬೇಕಿದೆ. ಹೊರನಾಡಿನಲ್ಲಿ ಕೂಡಲೇ ಅರ್ಹ ವಸತಿ ರಹಿತರಿಗೆ ನಿವೇಶನದ ಹಕ್ಕುಪತ್ರ ವಿತರಿಸಬೇಕು ಎಂದು ಆಗ್ರಹಿಸಿದರು.
ಕಾಮ್ರೇಡ್ ಗೋಪಾಲ ಶೆಟ್ಟಿ ಮಾತನಾಡಿ, ನಮ್ಮ ಪಕ್ಷ 15 ವರ್ಷದಿಂದ ಬಡವರ ಪರವಾಗಿ ಸೂರಿಗಾಗಿ ಸಮರ ನಡೆಸುತ್ತಿದೆ. ಆದರೆ ಸರ್ಕಾರಗಳು ಈವರೆಗೂ ವಸತಿ ರಹಿತರಿಗೆ ನಿವೇಶನ ಹಂಚಿಕೆ ಮಾಡಿಲ್ಲ. ಆದ್ದರಿಂದ ಸಿಪಿಐ ಮತ್ತೆ ಹೋರಾಟದ ಮೂಲಕ ಅಧಿಕಾರಿಗಳು ಮತ್ತು ಸರ್ಕಾರವನ್ನು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ ಎಂದರು.
ಪಿಡಿಒ ಅರುಣ ಕುಮಾರ್ ಮತ್ತು ಗ್ರಾಪಂ ಅಧ್ಯಕ್ಷ ಮಧು ಪ್ರಸಾದ್‌ಗೆ ಮನವಿ ಸಲ್ಲಿಸಿದರು. ಮುಖಂಡ ರಮೇಶ್ ಕೆಳಗೂರು ಮತ್ತಿತರರಿದ್ದರು