ಮಸ್ಕಿಯಲ್ಲಿ ತಹಸೀಲ್ದಾರ್ ಮಂಜುನಾಥ ಭೋಗಾವತಿಗೆ ರೈತರು ಮನವಿ ಸಲ್ಲಿಸಿದರು. ಪ್ರಮುಖರಾದ ಮಲ್ಲನಗೌಡ ಹಳ್ಳಿ, ಬಸನಗೌಡ ಹಳ್ಳಿ, ಶರಣಪ್ಪ ಉದ್ಬಾಳ, ಶರಣಗೌಡ ಬಸವಪುರ, ಬಸವರಾಜ ಸಂತೆಕೆಲ್ಲೂರು, ಈರಣ್ಣ ಗುಡಿಹಾಳ, ಶಿವನಗೌಡ ವಟಗಲ್, ಯಮನೂರು ಗೋನವಾರ, ಸಂತೋಷ ಸಾಹುಕಾರ, ದೊಡ್ಡಪ್ಪ ಹೊಸಗೌಡ್ರು ಇತರರಿದ್ದರು. 
ಜಿಲ್ಲೆ

ಜಮೀನುಗಳಿಗೆ ತೆರಳಲು ಸೂಕ್ತ ದಾರಿ ಕಲ್ಪಿಸಿ

ಮಸ್ಕಿ: ತಾಲೂಕಿನ ಸಂತೆಕೆಲ್ಲೂರು ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ 748ಎ ನಿರ್ಮಾಣ ಕಾಮಗಾರಿಯಿಂದ ಜಮೀನುಗಳಿಗೆ ಹೋಗಲು ದಾರಿ ಇಲ್ಲದಂತಾಗಿದ್ದು, ಸೂಕ್ತ ರಸ್ತೆ ನಿರ್ಮಿಸಿಕೊಡಬೇಕೆಂದು ಒತ್ತಾಯಿಸಿ ರೈತರು ಪಟ್ಟಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮಂಜುನಾಥ ಭೋಗಾವತಿಗೆ ಮನವಿ ಸಲ್ಲಿಸಿದರು.

ರೈತ ಶರಣಪ್ಪ ಉದ್ಬಾಳ ಮಾತನಾಡಿ, ಶೇ.90 ರೈತರು ರಾಷ್ಟ್ರೀಯ ಹೆದ್ದಾರಿ ದಾಟಿ ಜಮೀನುಗಳಿಗೆ ಹೋಗಬೇಕಾಗಿದೆ. ಈಗ ಹೆದ್ದಾರಿ ಪ್ರಾಧಿಕಾರದವರು ರಸ್ತೆ ಮುಚ್ಚಿ ಒಂದು ಕಡೆ ಚಿಕ್ಕದಾಗಿ ಅಂಡರ್‌ಪಾಸ್ ಕೊಡುವುದಾಗಿ ಹೇಳುತ್ತಿದ್ದಾರೆ. ಇದರಿಂದ ರೈತರಿಗೆ ತೊಂದರೆ ಆಗುತ್ತದೆ. ರಾಷ್ಟ್ರೀಯ ಹೆದ್ದಾರಿ ಕಾಯ್ದೆ 1956 ಹಾಗೂ ಭೂಸ್ವಾಧೀನ ಕಾಯ್ದೆ 2013ರ ಪ್ರಕಾರ ರೈತರಿಗೆ ಯಾವುದೇ ತೊಂದರೆ ಆಗದಂತೆ ಸೂಕ್ತ ದಾರಿ ಕಲ್ಪಿಸುವುದು ಸರ್ಕಾರ ಮತ್ತು ಹೆದ್ದಾರಿ ಪ್ರಾಧಿಕಾರದ ಜವಾಬ್ದಾರಿ. ಕುಣಿಕೆಲ್ಲೂರು- ಕಸಬಾಲಿಂಗಸುಗೂರು, ಗೊನವಾರ-ಸರ್ಜಾಪುರ, ಸಂತೆಕೆಲ್ಲೂರು-ಶಾಂತಪುರ, ಮುಸ್ಲಿಕಾರ್ಲಕುಂಟಿ-ರಾಯನದೋಣಿ, ಮಟ್ಟೂರು ಗ್ರಾಮದಲ್ಲಿ ಮೊದಲಿನಂತೆ ಸುಗಮ ಕೃಷಿ ಚಟುವಟಿಕೆಗಳಿಗೆ ಶಾಶ್ವತ ದಾರಿ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಪ್ರಮುಖರಾದ ಮಲ್ಲನಗೌಡ ಹಳ್ಲಿ, ಬಸನಗೌಡ ಹಳ್ಳಿ, ಶರಣಗೌಡ ಬಸವಪುರ, ಬಸವರಾಜ ಸಂತೆಕೆಲ್ಲೂರು, ಈರಣ್ಣ ಗುಡಿಹಾಳ, ಶಿವನಗೌಡ ವಟಗಲ್, ಯಮನೂರು ಗೋನವಾರ, ಸಂತೋಷ ಸಾಹುಕಾರ, ಸಿದ್ದರಾಮಪ್ಪ, ದೊಡ್ಡಪ್ಪ ಹೊಸಗೌಡ್ರು, ಸಂತೆಕೆಲ್ಲೂರು, ಕುಣಿಕೆಲ್ಲೂರು, ಮಿಟ್ಟಿಕೆಲ್ಲೂರು, ಗೋನವಾರ, ಮುಸ್ಲಿಕಾರ್ಲಕುಂಟಿ, ಮಟ್ಟೂರು ಗ್ರಾಮದ ರೈತರು ಇದ್ದರು.