ತೇರದಾಳ ತಾಲೂಕಿನ ತಮದಡ್ಡಿ ಗ್ರಾಮ ಕೃಷ್ಣಾ ನದಿ ತೀರಕ್ಕೆ ಜಮಖಂಡಿ ಎಸಿ ಶ್ವೇತಾ ಬೀಡಿಕರ್ ಭೇಟಿ ನೀಡಿ ವಿಕ್ಷಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ತಹಸೀಲ್ದಾರ್ ಗಿರೀಶ ಸ್ವಾಧಿ, ಉಪತಹಸೀಲ್ದಾರ್ ಶ್ರೀಕಾಂತ ಮಾಯನ್ನವರ ಇದ್ದರು. 
ಜಿಲ್ಲೆ

ತಮದಡ್ಡಿಗೆ ಹೊಸ ಬೋಟ್ ಒದಗಿಸಿ

Vijayapura - Desk - Gurappa Lokuri

ತೇರದಾಳ: ತಮದಡ್ಡಿ ಗ್ರಾಮಕ್ಕೆ ಸೋಮವಾರ ಜಮಖಂಡಿ ಎಸಿ ಶೇತಾ ಬೀಡಿಕರ್ ಭೇಟಿ ನೀಡಿ, ಕೃಷ್ಣಾ ನದಿ ಪ್ರಾತ್ರ, ಪ್ರವಾಹ ಸ್ಥಿತಿ ವೀಕ್ಷಿಸಿದರಲ್ಲದೆ, ಅಧಿಕಾರಿಗಳು ಹಾಗೂ ಸ್ಥಳೀಯರಿಂದ ಮಾಹಿತಿ ಪಡೆದುಕೊಂಡರು.

ಬಳಿಕ ಮಾತನಾಡಿದ ಎಸಿ ಬೀಡಿಕರ್, . ಮುನ್ನೆಚ್ಚರಿಕೆ ಕ್ರಮವಾಗಿ ಮಕ್ಕಳು, ಜಾನುವಾರುಗಳು ಹಾಗೂ ರೈತರು ನದಿ ನೀರಿಗೆ ಇಳಿಯದಂತೆ ಎಚ್ಚರಿಕೆ ವಹಿಸಬೇಕು. ಅಲ್ಲದೆ, ಗ್ರಾಮಸ್ಥರು ಸುರಕ್ಷತೆಗಾಗಿ ಸುರಕ್ಷಿತ ಸ್ಥಳಗಳಿಗೆ ಬರುವಂತೆ ಸೂಚಿಸಿದರು.

ತಮದಡ್ಡಿ ಗ್ರಾಮದಲ್ಲಿ ಸಂಚರಿಸುವ ಬೋಟ್ 10 ವರ್ಷದಷ್ಟು ಹಳೆಯದಾಗಿದೆ. ಹಾಗಾಗಿ ಹೊಸ ಬೋಟ್ ನೀಡಬೇಕು. ಗ್ರಾಮವು ಮುಳುಗಡೆ ಎಂದು ಘೋಷಣೆಯಾಗಿ 15 ವರ್ಷ ಗತಿಸಿದರೂ ಪುನರ್ವಸತಿ ಕೇಂದ್ರ ನಿರ್ಮಾಣವಾಗುತ್ತಿಲ್ಲ. ಹೀಗಾಗಿ ಪ್ರತಿ ಸಾರಿ ಪ್ರವಾಹ ಸಂದರ್ಭ ಕುಟುಂಬ ಸಮೇತರಾಗಿ ಗ್ರಾಮ ಬಿಟ್ಟು ಹೋಗಲು ತೊಂದರೆಯಾಗುತ್ತಿದೆ. ಆದ್ದರಿಂದ ಶೀಘ್ರ ಸಮಸ್ಯೆ ಬಗೆಹರಿಸಬೇಕು. ಗ್ರಾಮದಲ್ಲಿನ ಅಂದಾಜು 16 ಮನೆಗಳಿಗೆ ಪರಿಹಾರವೂ ಬಂದಿಲ್ಲ. ಕೂಡಲೇ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದರು.

ತಹಸೀಲ್ದಾರ್ ಗಿರೀಶ ಸ್ವಾಧಿ, ಉಪತಹಸೀಲ್ದಾರ್ ಶ್ರೀಕಾಂತ ಮಾಯನ್ನವರ, ಕಂದಾಯ ನಿರೀಕ್ಷಕ ಪ್ರಕಾಶ ಮಠಪತಿ, ಪಿಡಿಒ ಪ್ರಕಾಶ ಕನ್ನೊಳ್ಳಿ, ಗ್ರಾಪಂ ಅಧ್ಯಕ್ಷ ಭೀಮಪ್ಪ ಕೊಣ್ಣೂರ, ಮುಖಂಡ ಸುರೇಶ ಅಕ್ಕಿವಾಟ ಇತರರಿದ್ದರು.