ಜಿಲ್ಲೆ

ಹೆಮ್ಮೆಯ ಧಾರವಾಡಿಗ ಪ್ರಶಸ್ತಿ ಪ್ರದಾನ

Dharwada - Vikram Nadiger

ಧಾರವಾಡ: ಫೋಟೊ ಮತ್ತು ವಿಡಿಯೋಗ್ರಾಫರ್ಸ್​ ಸಂಘದ ವತಿಯಿಂದ ಇಲ್ಲಿನ ಆಲೂರು ವೆಂಕಟರಾವ್​ ಸಭಾಭವನದಲ್ಲಿ ಬುಧವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ವಿಜಯವಾಣಿ ಛಾಯಾಗ್ರಾಹಕ ಶಿವಲಿಂಗಯ್ಯ ಪಾಟೀಲ, ಹಿರಿಯ ಛಾಯಾಗ್ರಾಹಕ ಮಿಲಿಂದ ಪಿಸೆ ಹಾಗೂ ಪತ್ರಕರ್ತ ಬಸವರಾಜ ಆನೆಗುಂದಿ ಅವರಿಗೆ ಹೆಮ್ಮೆಯ ಧಾರವಾಡಿಗ-2024 ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂಘದ ಅಧ್ಯಕ್ಷ ರಾಹುಲ್​ ದತ್ತಪ್ರಸಾದ, ರಂಗಾಯಣ ನಿರ್ದೇಶಕ ರಾಜು ತಾಳಿಕೋಟಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ ಸುಳ್ಳೊಳ್ಳಿ, ಪೃಥ್ವಿರಾಜ್​ ಮಿಸ್ಕಿನ್​, ಮುರಳಿಧರ ಮಲಜಿ, ಶ್ರೀನಿವಾಸ ಮಲಜಿ ಇತರರು ಇದ್ದರು.