ಜಿಲ್ಲೆ

ಭಾಷೆಗೆ ಧಕ್ಕೆಯಾದಾಗ ಹೋರಾಟ ನಿಶ್ಚಿತ - ಕರವೇ ಪದಗ್ರಹಣ ಕಾರ್ಯಕ್ರಮ

ಡಿ. ಎಂ. ಮಹೇಶ್

ದಾವಣಗೆರೆ: ಕನ್ನಡದ ನೆಲ-ಜಲ, ಭಾಷೆಗೆ ಧಕ್ಕೆ ಬಂದಾಗ ಹೋರಾಟ ಅನಿವಾರ್ಯ ಎಂದು ಕರವೇ ಜಿಲ್ಲಾಧ್ಯಕ್ಷ ಎಂ.ಎಸ್. ರಾಮೇಗೌಡ ತಿಳಿಸಿದರು.

ಹರಿಹರದಲ್ಲಿ ಮಂಗಳವಾರ, ಕರ್ನಾಟಕ ರಕ್ಷಣಾ ವೇದಿಕೆಯ ನಗರ ಘಟಕದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಟಿ.ಎ.ನಾರಾಯಣಗೌಡರ ನೇತೃತ್ವದಲ್ಲಿ 70 ಲಕ್ಷ ಜನ ಸದಸ್ಯರನ್ನು ಒಳಗೊಂಡಿರುವ ಏಕೈಕ ಸಂಘಟನೆಯೇ ಕರ್ನಾಟಕ ರಕ್ಷಣಾ ವೇದಿಕೆ ಆಗಿದೆ. ಸಂಘಟನೆ ಬಲಿಷ್ಠಗೊಳಿಸಿ ಕನ್ನಡದ ಜಾಗೃತಿ ಮೂಡಿಸುವುದು, ನಾಡು, ನುಡಿ, ಸಂಸ್ಕೃತಿ, ಸಂಸ್ಕಾರ ಕನ್ನಡಿಗರ ಬದುಕು ಕಟ್ಟುವ ನಿಟ್ಟಿನಲ್ಲಿ ಹೋರಾಟ ಮಾಡುವುದು ಮೂಲ ಉದ್ದೇಶವಾಗಿದೆ ಎಂದರು.

ರಾಜ್ಯದಲ್ಲಿನ ಕೆಲವರ ಸೋಗಲಾಡಿತನದಿಂದ ಕನ್ನಡ ಭಾಷೆಗೆ ಕುತ್ತು ಬಂದಿದೆ, ಅಂತಹ ಕನ್ನಡಿಗರಿಗೆ ಪ್ರತಿ ತಾಲೂಕು, ನಗರ, ಹೋಬಳಿ, ಗ್ರಾಮ ಮಟ್ಟದಲ್ಲಿ ಜಾಗೃತಿ ಮೂಡಿಸುವ ಮೂಲಕ ಸಂಘಟನೆ ಬಲಪಡಿಸಲಾಗುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕರವೇ ಜಿಲ್ಲಾ ಉಪಾಧ್ಯಕ್ಷ ನಾಗರಾಜ್ ಮೆಹರವಾಡೆ, ಜಿಲ್ಲಾ ಸಂಚಾಲಕ ಎಂ. ಟಿ. ರಫಿಕ್, ನಗರ ಘಟಕ ಉಪಾಧ್ಯಕ್ಷ ಜಿ.ಎಸ್. ಸಂತೋಷ್, ತಾಲೂಕು ಅಧ್ಯಕ್ಷ ರಾಜೇಶ್, ರುದ್ರಗೌಡ, ಅಮಾನುಲ್ಲಾ ಖಾನ್, ನಾಗಮ್ಮ. ಶಶಿ ನಾಯಕ್, ಮೆಹಬೂಬ್ ಅಲಿ ಶಾರುಖ್ ಇತರರಿದ್ದರು.

--