raichur 
ಜಿಲ್ಲೆ

ಇ-ಬಿ ಖಾತ ತ್ವರಿತವಾಗಿ ವಿತರಣೆ ಮಾಡದಿದ್ದರೆ ಪ್ರತಿಭಟನೆ ಎಚ್ಚರಿಕೆ

Raichur - Reporter - Rachhai Swamy

ರಾಯಚೂರು ರಾಯಚೂರು ನಗರಸಭೆ ಮಹಾನಗರ ಪಾಲಿಕೆಯಾಗಿ ಏಳು ತಿಂಗಳು ಕಳೆದರು ಪಾಲಿಕೆ ಆಯುಕ್ತರು ಇ-ಖಾತಾ, ಬಿ -ಖಾತಾ ನೀಡಲು ರಾಜ್ಯದಲ್ಲಿ ಎಲ್ಲಿಯೂ ಇರದೇ ಮಾನದಂಡಗಳನ್ನು ಅನುಸರಿಸಿ ಅಗತ್ಯ ವಿಳಂಬಕ್ಕೆ ಕಾರಣವಾಗಿದ್ದಾರೆಂದು ಪಾಲಿಕೆ ಬಿಜೆಪಿ ಸದಸ್ಯ ಇ.ಶಶಿರಾಜ ಆರೋಪಿಸಿದರು.

ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರ ವಾರ್ಡ್ 7,8, 9, 28,29, 30, 31 ಬಡಾವಣೆ ಜನರಿಗೆ ಬಿ-ಖಾತಾ ಪಡೆಯಲು ಅರ್ಜಿ ಸಲ್ಲಿಸಿದರೆ ನಿರಾಕರಿಸಿಲಾಗುತ್ತಿದೆ. ಸರ್ಕಾರಿ ಭೂಮಿ, ಕೆರೆಗಳೆಂದು ಗುರುತಿಸಿ ಬಿ-ಖಾತಾ ನೀಡುತ್ತಿಲ್ಲ. 1994 ರಿಂದ ವಾಸ ಮಾಡುತ್ತಿರುವ ನಿವಾಸಿಗಳು ಪಾಲಿಕೆಯಿಂದ ಆಗುತ್ತಿರುವ ಸಮಸ್ಯೆಗೆ ಪರಿಹಾರ ಒದಗಿಸುತ್ತಿಲ್ಲ. ಹತ್ತಾರು ಬಾರಿ ಗಮನ ಸೆಳೆದರೂ ಸ್ಪಂದಿಸುತ್ತಿಲ್ಲ. ದಿಶಾಂಕ ಮ್ಯಾಪ್ ವ್ಯವಸ್ಥೆ ಜಾರಿ ಮುನ್ನವೇ ಜನರು ವಾಸ ಮಾಡುತ್ತಿದ್ದಾರೆ.

ಪಾಲಿಕೆ ವ್ಯಾಪ್ತಿಯ 282 ಮಳಿಗೆಗಳಿಂದ ಕಳೆದ 30 ವರ್ಷದಿಂದ ಕೇವಲ 700 ರೂ. ಮಾತ್ರ ಬಾಡಿಗೆ ವಸೂಲಿ ಮಾಡಲಾಗುತ್ತಿದೆ. ಹೊಸದಾಗಿ ಟೆಂಡರ್ ಕರೆಯುವ ಪ್ರಕ್ರಿಯೆ ಪಾಲಿಕೆ ನಡೆಸುತ್ತಿಲ್ಲ. ಇದರಿಂದ 5 ಕೋಟಿ 84 ಲಕ್ಷ ರೂ ಆದಾಯವೂ ಪಾಲಿಕೆ ವಂಚನೆಯಾಗುತ್ತಿದೆ. ಕೆಲ ಪ್ರಭಾವಿಗಳು ಟೆಂಡರ್ ಆಗದಂತೆ ತಡೆಯುತ್ತಿದ್ದಾರೆ ಎಂದರು. ನಾಲ್ಕು ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಗಿದೆಯಾದರೂ ಕ್ರಮವಾಗುತ್ತಿಲ್ಲ. ಪಾಲಿಕೆ ಆಯುಕ್ತರನ್ನು ಸರಳವಾಗಿ ಚುನಾಯಿತ ಸದಸ್ಯರು ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ.

ಪಾಲಿಕೆ ಆಯುಕ್ತರು ಏಕಪಕ್ಷೀಯ ನಿರ್ಧಾರದಿಂದ ಸಾಮಾನ್ಯ ಸಭೆಗಳು ಸಹ ನಡೆಯುತ್ತಿಲ್ಲ ಎಂದರು. ಜನನ ಮರಣ ಪ್ರಮಾಣ ಪತ್ರ, ಆಕ್ಯಪೇಷನ್ ಸರ್ಟಿಫಿಕೇಟ್ ಪಡೆಯಲು ಇಲ್ಲದೇ ಇರುವ ನಿಯಮಗಳನ್ನು ಅನುಸರಿಸಲಾಗುತ್ತಿದೆ. ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ವಾರದಲ್ಲಿ ಸರಿಪಡಿಸದೇ ಹೋದರೆ ಬಿಜೆಪಿಯಿಂದ ಪ್ರತಿಭಟನೆ ನಡೆಸುವದಾಗಿ ಎಚ್ಚರಿಸಿದರು.

ಈ ಸಂದರ್ಭದಲ್ಲಿ ಸದಸ್ಯಎನ್.ಕೆ.ನಾಗರಾಜ,ಮುಖಂಡರಾದ ನಾಗರಾಜ, ಎನ್. ಶ್ರೀನಿವಾಸರೆಡ್ಡಿ, ಕಡಗೋಲು ಆಂಜಿನೇಯ್ಯ, ರಾಘವೇಂದ್ರ , ಬಿ.ಗೋವಿಂದ, ಮಹೇಂದ್ರರೆಡ್ಡಿ, ಆಂಜಿನೇಯ್ಯ, ಯು.ನರಸರೆಡ್ಡಿ ಇದ್ದರು.