ರಾಯಚೂರು ಇತ್ತೀಚೆಗೆ ಕಾಶ್ಮೀರದ ಪಹಲ್ಗಾಂನಲ್ಲಿ ಹಿಂದುಗಳ ಮೇಲೆ ನಡೆದ ದಾಳಿ ಖಂಡೀಸಿ ಹಿಂದು ಹಿತರಕ್ಷಣಾ ಸಮಿತಿಯಿಂದ ಏ.೨೭ರಂದು ಸಂಜೆ ೬ ಗಂಟೆಗೆ ನಗರದಲ್ಲಿ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಸಂಚಾಲಕ ಆನಂದತೀರ್ಥ -Àಡ್ನಿಸ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶದ ಇತಿಹಾಸದಲ್ಲಿ ಧರ್ಮದ ಮೇಲೆ ಹೆಚ್ಚಿನ ಪ್ರಹಾರಗಳಾಗುತ್ತಿವೆ. ದೇಶದ ಬದ್ಧತೆ ಹಾಗೂ ಧರ್ಮದ ಬದ್ಧತೆಗಾಗಿ ಪ್ರತಿಭಟನೆ ನಡೆಯಲಿದೆ ಈ ಉಗ್ರವಾದವನ್ನು ಖಂಡಿಸಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.
ನಗರದ ಶೆಟ್ಟಿಭಾವಿ ವೃತ್ತದಿಂದ ಆರಂಭವಾಗಿ ಚಂದ್ರಮೌಳೇಶ್ವರ ವೃತ್ತದಲ್ಲಿ ಅಂತ್ಯಗೊಳಲಿದೆ . ಪ್ರತಿಭಟನೆಗೆ ಎಲ್ಲಾ ಸ್ವಾಮೀಜಿಗಳಿಗೂ ಆಹ್ವಾನಿಸಲಾಗಿದೆ. ದೇಶದ ಪರವಾಗಿ, ಧರ್ಮದ ಪರವಾಗಿ ನಿಲ್ಲುವ ಪ್ರತಿಯೊಬ್ಬರೂ ಕೂಡ ಪ್ರತಿಭಟನೆಯಲ್ಲಿ ಭಾಗವಹಿಸಬಹುದಾಗಿದ್ದು, ಎರಡು ಸಾವಿರಕ್ಕೂ ಅಽಕ ಜನರು ಭಾಗಿಗಯಾಗುವ ನಿರೀಕ್ಷೆಯಿದೆಂದರು.
ಈ ಸಂದರ್ಭದಲ್ಲಿ ಶಂಶಾಲಮಪ್ಪ ದೊಡ್ಡಮನಿ, ಹನುಮಂತ, ಅಶೋಕ ಪಾಟೀಲ್, ರವಿಕೃಷ್ಣ, ರಮೇಶ, ಶಿವಬಸ್ಸಪ್ಪ ಮಾಲಿಪಾಟೀಲ್ ಇದ್ದರು.