ಜಿಲ್ಲೆ

ಸರ್ವರ್ ಸರಿಪಡಿಸುವಂತೆ ಪ್ರತಿಭಟನೆ

ತೆಲಸಂಗ: ಪಡಿತರ ಚೀಟಿ ತಿದ್ದುಪಡಿಗೆ ಎದುರಾಗಿರುವ ಸರ್ವರ್ ಸಮಸ್ಯೆ ಸರಿಪಡಿಸುವಂತೆ ಗ್ರಾಮಸ್ಥರು ಗ್ರಾಮ ಒನ್ ಕೇಂದ್ರ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ತೆಲಸಂಗ ಗ್ರಾಮಸ್ಥರು ಪಡಿತರ ಚೀಟಿ ತಿದ್ದುಪಡಿಗೆ ಎದುರಾಗಿರುವ ಸರ್ವರ್ ಸಮಸ್ಯೆ ಸರಿಪಡಿಸುವಂತೆ ಒತ್ತಾಯಿಸಿ ಗ್ರಾಮ ಒನ್ ಕೇಂದ್ರದ ಎದುರು ಪ್ರತಿಭಟಿಸಿದರು. ಬಸವಲಿಂಗ ಹಿರೇಮಠ, ಶೇಖರ ವಳಸಂಗ, ಡಾ.ಎಸ್.ಕಾಮನ್ ಇತರರಿದ್ದರು.  

ಪಡಿತರ ತಿದ್ದುಪಡಿಗಾಗಿ ವಾರದಿಂದ ಕೂಲಿ ಕೆಲಸ ಬಿಟ್ಟು ಶಾಲೆ ಕಲಿಯುವ ಮಕ್ಕಳೊಂದಿಗೆ ಗ್ರಾಮ ಒನ್ ಕೇಂದ್ರದ ಎದುರು ಠಿಕಾಣಿ ಹೂಡಿದ್ದೀವಿ. ಆದರೆ, ಕೇಂದ್ರದಲ್ಲಿನ ಸರ್ವರ್ ಸಮಸ್ಯೆಯಿಂದ ದಿನಕ್ಕೆ ಒಂದೂ ಪಡಿತರ ಚೀಟಿ ತಿದ್ದುಪಡಿ ಆಗುತ್ತಿಲ್ಲ. ದಿನಾ ದುಡ್ದ ತಿನ್ನೋ ನಾವು ಕೆಲ್ಸಾ ಬಿಟ್ಟು ವಾರಗಟ್ಟಲೇ ಕಾಯ್ದರೆ ಹೊಟ್ಟೆ ತುಂಬೋದು ಹೇಗೆ? ನಮ್ಮ ಹೆಸರು ತಿದ್ದುಪಡಿ, ಹೆಸರು ಸೇರ್ಪಡೆ, ವಿಳಾಸ ಬದಲಾವಣೆಗೆ ಸರ್ಕಾರ ಅವಕಾಶ ಕಲ್ಪಿಸಿದೆ. ಸರ್ಕಾರ ಸರ್ವರ್ ಸಮಸ್ಯೆ ಬಗೆಹರಿಸಲಿ. ಇಲ್ಲದಿದ್ದರೆ ಪ್ರತಿಭಟನೆ ಬಿಸಿ ಎದುರಿಸಬೇಕಾಗುತ್ತದೆ ಗ್ರಾಮಸ್ಥರು ಎಚ್ಚರಿಸಿದರು.

ಕನ್ನಾಳ ಗ್ರಾಮದ ಬಸವಲಿಂಗ ಹಿರೇಮಠ, ಶೇಖರ ವಳಸಂಗ, ಡಾ.ಎಸ್.ಕಾಮನ್, ಅಶೋಕ ಮರನೂರ, ಸಂತೋಷ ಪಾಟೀಲ, ಬಸವರಾಜ ನೇಮಗೌಡ, ಕೆಂಚಪ್ಪ ದಳವಾಯಿ, ವಿನಾಯಕ ಮಾಳಿ, ರವಿ ದಳವಾಯಿ ಇತರರಿದ್ದರು.