ರಾಯಚೂರು ತೆಲಂಗಾಣದ ಪಾಸ್ಟರ್ ಪ್ರವೀಣ ಪಗಡಾಲ್ ಇವರ ಕೊಲೆ ಘಟನೆಯನ್ನು ಸಿಬಿಐ ತನಿಖೆಗೆ ವಹಿಸುವಂತೆ ಒತ್ತಾಯಿಸಿ ಏ.೩ ರಂದು ಕಲ್ವರಿ ಪಾಸ್ರ‍್ಸ್ ಅಸೋಸಿಯೇಷನ್ ವತಿಯಿಂದ ಪ್ರತಿಭಟನಾ ರ‍್ಯಾಲಿ ನಡೆಸಲಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ಜಾನವೆಸ್ಲಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇತ್ತಿಚ್ಚಿಗೆ ಮಾ.೨೪ ರಂದು ಹೈದ್ರಾಬಾದನಿಂದ ರಾಜಮಂಡ್ರಿಗೆ ಬೈಕ್ ಮೇಲೆ ತೆರಳುತ್ತಿದ್ದಾಗ ರಸ್ತೆ ಅಪಘಾತವಾಗಿದೆ ಎಂದು ಸುಳ್ಳು ವರದಿ ದಾಖಲಿಸಲಾಗಿದೆ. ಪ್ರವೀಣ ಪಗಡಾಲ್ ಇವರ ಮೈ ಮೇಲೆ ಗಾಯಗಳಾಗಿದ್ದು, ಕೊಲೆ ಶಂಕೆಯಿದೆ. ಯಾರೋ ಅಪರಿಚಿತರು ಕೊಲೆ ಮಾಡಿರ ಬಹುದಾಗಿದ್ದು ಕೂಡಲೇ ಉನ್ನತ ಮಟ್ಟದ ತನಿಖೆ ನಡೆಸಬೇಕು. ಅಪರಾಽಗಳಿಗೆ ಶಿಕ್ಷಿಸಬೇಕು. ಪ್ರವೀಶಪಗಡಾಲ್ ಇವರು ಜೀವ ಬೆದರಿಕೆಯಿದೆ ಎಂದು ಹಲವಾರು ಬಾರಿ ಹೇಳಿಕೊಂಡಿದ್ದರು. ಕಾನೂನು ರೀತಿಯಲ್ಲಿ ತನಿಖೆ ನಡೆಸಿ ಘಟನೆ ಸತ್ಯಾಸತ್ಯತೆ ಬಹಿರಂಗಪಡಿ ಸಬೇಕೇಂದು ಮನವಿ ಮಾಡಿದರು.
-Áಸ್ಟರ್ ವಿಲ್ಸನ್ ರವಿ ಕುಮಾರ ಮಾತನಾಡಿ, ಪ್ರವೀಣ ಪಗಡಾಲ್ ಸಾವಿನ ಸುತ್ತು ಅನೇಕ ಅನುಮಾನಗಳಿಗೆ ರಸ್ತೆ ಅಪಘಾತದಲ್ಲಿ ಸಾವಾಗಿಲ್ಲ. ಅವರನ್ನು ದುಷ್ಕರ್ಮಿಗಳು ಕೊಲೆ ಮಾಡಿರಬ ಹುದಾಗಿದ್ದು ಕೂಡಲೇ ತೆಲಂಗಾಣ ಸರ್ಕಾರ ಸಿಬಿಐ ತನಿಖೆವಹಿಸಬೇಕು ಎಂದರು. ಏ.೩ ರಂದು ನಗರ ಬಾಬುಜಗಜೀವನರಾಂ ವೃತ್ತದಿಂದ ಡಿಸಿ ಕಚೇರಿ
ವರೆಗೆ ಪ್ರತಿಭಟನಾ ರ‍್ಯಾಲಿ ನಡೆಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಪದಾಽಕಾರಿಗಳಾದ ಸಿ.ಪ್ರಭಾಕರ, ಜೆಮ್ಸ್-Áಸ್ಟರ್, ಮಾರ್ಟಿನ್, ರಾಜೇಶ, ದೇವದಾಸ,ರುಬಿನ್, ಶಿವುಕುಮಾರ, ಅವಿಲ್ ಕುಮಾರ ಇದ್ದರು.