:ಆರ್.ಮಾನಸಯ್ಯ 
ಜಿಲ್ಲೆ

ಜಮೀನು ಹಂಚಿಕೆಗೆ ಒತ್ತಾಯಿಸಿ 11ರಂದು ಧರಣಿ

Kopala - Desk - Eraveni

ಸಿಂಧನೂರು: ಜವಳಗೇರಾ ನಾಡಗೌಡರ ಸರ್ಕಾರಿ ಹೆಚ್ಚುವರಿ ಭೂಮಿ 1064 ಎಕರೆ ಭೂರಹಿತರಿಗೆ ಹಂಚಲು ಒತ್ತಾಯಿಸಿ ಸಿಪಿಐ(ಎಂಎಲ್) ರೆಡ್‌ಸ್ಟಾರ್, ಕರ್ನಾಟಕ ರೈತ ಸಂಘ (ಎಐಕೆಕೆಎಸ್) ತಾಲೂಕು ಸಮಿತಿಯಿಂದ ನ.11ರಂದು ತಹಸಿಲ್ ಕಚೇರಿ ಮುಂದೆ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ಪಾಲಿಟ್ ಬ್ಯೂರೋ ಸದಸ್ಯ ಆರ್.ಮಾನಸಯ್ಯ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ನಡೆದ ಸಭೆಯಲ್ಲಿ ಮಾತನಾಡಿದರು. ಭೂ ಸಂಘರ್ಷ ಕಳೆದ 6 ತಿಂಗಳು ಹಗಲು-ರಾತ್ರಿ ಧರಣಿ ನಡೆಸುವ ಮೂಲಕ ಗಮನ ಸೆಳೆದಿದೆ. ಇದರಿಂದ ಎಚ್ಚೆತ್ತ ಆಡಳಿತ ಸಿಂಧನೂರು ಭೂ ನ್ಯಾಯ ಮಂಡಳಿ ರಚನೆ ಮಾಡಿದೆ. ಭೂನ್ಯಾಯ ಮಂಡಳಿ ಮುಂದೆ ಹಕ್ಕೊತ್ತಾಯ ಮಂಡಿಸಿ, ಅನ್ಯರ ಪಾಲಾಗಿರುವ ತಾಲೂಕಿನ ಸಾವಿರಾರು ಎಕರೆ ಹೆಚ್ಚುವರಿ ಭೂಮಿಯನ್ನು, ಭೂಹೀನರಿಗೆ ಹಂಚಬೇಕೆಂದು ಒತ್ತಾಯಿಸಿ ಹೋರಾಟ ನಡೆಸಲು ಸಭೆಯಲ್ಲಿ ಒಮ್ಮತದಿಂದ ತೀರ್ಮಾನಿಸಲಾಗಿದೆ ಎಂದರು.