ರಾಯಚೂರು ಪರಿಶಿಷ್ಟ ಪಂಗಡ ಸಮೂದಾಯಕ್ಕೆ ಅನ್ಯಾಯ ಮಾಡಿ ನಕಲಿ ಎಸ್‌ಟಿ ಪ್ರಮಾಣ ಪತ್ರ ನೀಡುವದನ್ನು ತಡೆಗಟ್ಟಲು ಆಗ್ರಹಿಸಿ ಆ.13 ರಂದು ಯಾದಗಿರಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆಂದು ಹೈದ್ರಾಬಾದ್ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘದ ವಿಭಾಗೀಯ ಕಾರ್ಯದರ್ಶಿ ರಘವೀರ ನಾಯಕ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮೂದಾಯ ಪರ್ಯಾಯ ಪದಗಳಾದ ನಾಯಕ ತಳವಾರ, ಪರಿಹಾರ ಎಂದು ಕೇಂದ್ರ ಸ್ಪಷ್ಟ ಆದೇಶಗಳಿದ್ದರೂ ಹಿಂದೂಳಿದ ಪಟ್ಟಿಯಲ್ಲಿರುವ ತಳವಾರ, ಪರಿಹಾರ ಹೆಸರಿನಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ಪಡೆಯಲಾಗುತ್ತಿದೆ. ಮೀಸಲಾತಿ ದುರ್ಬಳಕೆ ಅವ್ಯಾಹುತವಾಗಿ ನಡೆಯುತ್ತಿರುವದನ್ನು ತಡೆಯಲು ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದ್ದು, ಸಮುದಾಯ ಜನರು ಹೆಚಿ ನಸಂಖ್ಯೆಯಲ್ಲಿ ಭಾಗವಹಿಸಬೇಕೆಂದರು.
ಸಹಕಾರ ಸಚಿವ ಕೆ.ಎನ್.ರಾಜಣ್ಣ ಇವರನ್ನು ಸಂಪುಟದಿಂದ ಕೈ ಬಿಟ್ಟಿರು ವದನ್ನನು ಖಂಡಿಸುವದಾಗಿ ಹೇಳಿದರು. ನೇರ ಮತ್ತು ಸತ್ಯವನ್ನು ಮಾತನಾಡಿದ್ದರಿಂದ ಕಾಂಗ್ರೆಸ್ ನಾಯಕರು ಏಕಾಏಕಿ ಸಚಿವ ಸ್ಥಾನದಲ್ಲಿ ಕೈ ಬಿಟ್ಟಿದ್ದಾರೆ. ಪಕ್ಷದಲ್ಲಿ ಸತ್ಯವನ್ನು ಮಾತನಾಡಿರುವದು ಸಹ ಅಪರಾಧವೆಂದು ಭಾವಿಸಿರುವದು ಖಂಡನೀಯವಾಗಿದೆ.
ಕೂಡಲೇ ಮರಳಿ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಡಬೇಕು. ಇಲ್ಲದೇ ಹೋದಲ್ಲಿ ಹೋರಾಟ ತೀವ್ರಗೊಳಿಸುವದಾಗಿಹೇಳಿದರು. ಈ ಸಂದರ್ಭದಲ್ಲಿ ರಾಚಣ್ಣ ನಾಯಕ, ರಾಮುನಾಯಕ ಜಲ್ಲಿ, ರಾಮಕೃಷ್ಣ ನಾಯಕ ಇದ್ದರು.