ಮೈಸೂರು: ಮಳವಳ್ಳಿಯಲ್ಲಿ ಬಾಲಕಿಯ ಮೇಲೆ ಟ್ಯೂಷನ್ ಶಿಕ್ಷಕ ಅತ್ಯಾಚಾರ ನಡೆಸಿ ಹತ್ಯೆಗೈದಿರುವುದನ್ನು ಖಂಡಿಸಿ ಟೀಂ ಮೈಸೂರು ಪ್ರತಿಷ್ಠಾನ ವತಿಯಿಂದ ಗಾಂಧಿ ವೃತದಲ್ಲಿ ಪ್ರತಿಭಟನೆ ನಡೆಯಿತು.
ಮೃತ ಬಾಲಕಿಯ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಪ್ರಾರ್ಥಿಸಿ ದೀಪಗಳನ್ನು ಬೆಳಗಿ ಮೌನಾಚಾರಣೆ ನಡೆಸಲಾಯಿತು. ಅತ್ಯಾಚಾರ ನಡೆಸಿದ ಕಾಮುಕನನ್ನು ಕೂಡಲೇ ಗಲ್ಲಿಗೇರಿಸಬೇಕು. ಅತ್ಯಾಚಾರ ನಡೆಸುವವರಿಗೆ ಕಠಿಣ ಶಿಕ್ಷೆ ನೀಡುವ ಕಾನೂನು ಜಾರಿಗೊಳಿಸಬೇಕು ಎಂದು ಒತ್ತಾಯಿಸಲಾಯಿತು.
ಪ್ರತಿಭಟನೆಯಲ್ಲಿ ತಂಡದ ಸದಸ್ಯರಾದ ಗೋಕುಲ್ ಗೋವರ್ಧನ್, ಯಶವಂತ, ಸೋಮಶೇಖರ್ ರಾಜು, ಅನಿಲ್ ಜೈನ್, ಕಿರಣ್ ಜೈರಾಮ್ ಗೌಡ, ಆನಂದ್, ಮುರಳಿ, ಲಿಂಗರಾಜು, ಯತೀಶ್, ಸುನಿಲ್, ಸುಮಂತ್, ಗಣೇಶ, ರಘು ಹಾಗೂ ಇತರರು ಇದ್ದರು.