ಜಿಲ್ಲೆ

ಬಾಕಿ ವೇತನ ಬಿಡುಗಡೆ ಮಾಡಿ

ಕೊಪ್ಪಳ: ಬಾಕಿ ವೇತನ ಬಿಡುಗಡೆ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ವಿದ್ಯುತ್​ ವೈರ್​ಮನ್​ ಮತ್ತು ಇತರ ಕಾರ್ಮಿಕರ ಸಂದ ಪದಾಧಿಕಾರಿಗಳು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಹಾಲವರ್ತಿ ಸ್ಟೀಲ್​ ಟೆಕ್​ ಮತ್ತು ಕಾರ್ಖಾನೆಯಲ್ಲಿ ಆರಂಭದಿಂದ ಈವರೆಗೆ 45 ಕಾರ್ಮಿಕರು ಕೆಲಸ ಮಾಡಿದ್ದಾರೆ. ಬಾಕಿ 27 ಲಕ್ಷ ರೂ. ಕಾರ್ಖಾನೆ ನೀಡಿಲ್ಲ. ಮೊದಲ ಗುತ್ತಿಗೆದಾರ ಮೋಸ ಮಾಡಿದ್ದು ಕಾರ್ಮಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಗುತ್ತಿಗೆದಾರ ಪರಾರಿಯಾಗಿದ್ದು ಕಾರ್ಮಿಕ ನಿಯಮದಂತೆ ಕಂಪನಿ ಜವಾಬ್ದಾರಿ ವಹಿಸಿಕೊಳ್ಳುತ್ತಿಲ್ಲ. ಕಾರ್ಮಿಕರಿಗೆ ನಿಯಮಾನುಸಾರ ಕನಿಷ್ಠ ವೇತನ ಪಾವತಿಸುತ್ತಿಲ್ಲ. ಸ್ಥಳಿಯ ಕಾರ್ಮಿಕರಿಗೆ ಆದ್ಯತೆ ನೀಡುತ್ತಿಲ್ಲ. ಸುರಾ ಸಾಮಗ್ರಿ ವಿತರಿಸಿಲ್ಲ. ಗುತ್ತಿಗೆದಾರರ ದಾಖಲೆ ಪರಿಶೀಲನೆ ಬಗ್ಗೆ ಅನುಮಾನವಿದೆ ಎಂದರು.

ತಕ್ಷಣ ಬಾಕಿ ವೇತನ ಬಿಡುಗಡೆ ಮಾಡಬೇಕು. ಗುತ್ತಿಗೆದಾರನ ವಿರುದ್ಧ ಕ್ರಮವಾಗಬೇಕು. ಕನಿಷ್ಠ ವೇತನ ಪಾವತಿಸಬೇಕು. ಸ್ಥಳಿಯರಿಗೆ ಆದ್ಯತೆ ನೀಡಬೇಕು. ಗುತ್ತಿಗೆದಾರರ ದಾಖಲೆ ಪರಿಶೀಲಿಸಿ. ಸರ್ಕಾರಕ್ಕೆ ಸಲ್ಲಿಸಬೇಕಾದ ತೆರಿಗೆ ಕಟ್ಟಿದ ದಾಖಲೆ ಪರಿಶೀಲಿಸಿ. ಇಎಸ್​ಐ, ಪಿಎ್​ ಹಾಗೂ ಇತರ ಭತ್ಯೆ ಕಲ್ಪಿಸಬೇಕು. ಕಾರ್ಮಿಕ ಅಧಿಕಾರಿಗಳನ್ನು ಕಳಿಸಿ ಕಾರ್ಮಿಕ ಕಾಯ್ದೆ ಪಾಲನೆ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಸಂದ ಪದಾಧಿಕಾರಿಗಳಾದ ಜೆ.ಶ್ರೀನಿವಾಸ, ಸಾಧಿಕ್​, ದಿನಕರ್​, ಭೀಮಪ್ಪ ದೊಡ್ಮನಿ, ಕೃಷ್ಣವೇಣಿ, ಟಿ.ಶಿವ ಇತರರಿದ್ದರು.