ಜಿಲ್ಲೆ

ಪರಿಹಾರಕ್ಕಾಗಿ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ

ರವಿ ಎಸ್. ಬಳೂಟಗಿ

ಮುಂಡರಗಿ: ಸಿಂಗಟಾಲೂರು ಏತ ನೀರಾವರಿ ಯೋಜನೆಯ ಎಡದಂಡೆ ಕಾಲುವೆ ಮುಖಾಂತರ ಮುಂಡವಾಡ ಸೇರಿ ಇನ್ನಿತರ ಗ್ರಾಮಗಳಿಗೆ ನೀರಾವರಿ ಕಲ್ಪಿಸುವುದಕ್ಕೆ ಭೂಸ್ವಾಧೀನ ಮಾಡಿಕೊಂಡಿರುವ ರೈತರ ಜಮೀನುಗಳಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಹಮ್ಮಿಗಿ, ಮುಂಡವಾಡ, ಜಾಲವಾಡಗಿ, ಬಿದರಹಳ್ಳಿ ಗ್ರಾಮದ ಹಲವು ರೈತರು ಸೋಮವಾರ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಮುಂಡವಾಡ, ಹಮ್ಮಿಗಿ ಮೊದಲಾದ ಗ್ರಾಮಗಳಿಗೆ ನೀರಾವರಿ ಕಲ್ಪಿಸಲು ಕಾಲುವೆ ಮತ್ತು ಉಪ ಕಾಲುವೆ ನಿರ್ಮಿಸಲು ಹಲವು ವರ್ಷಗಳ ಹಿಂದೆಯೇ ರೈತರ ಜಮೀನುಗಳನ್ನು ಭೂ ಸ್ವಾಧೀನ ಮಾಡಿಕೊಳ್ಳಲಾಗಿದೆ. 12 ವರ್ಷ ಕಳೆದರೂ ಹಲವಾರು ರೈತರಿಗೆ ಪರಿಹಾರ ಬಂದಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳನ್ನು ವಿಚಾರಿಸಿದರೂ ಯಾವುದೇ ಪ್ರಯೋಜವಾಗಿಲ್ಲ. ಆದ್ದರಿಂದ ಇನ್ನಾದರೂ ಇದಕ್ಕೆ ಸಂಬಂಧಿಸಿದ ಇಲಾಖೆಯು ರೈತರಿಗೆ ಪರಿಹಾರ ದೊರಕಿಸಿಕೊಡುವ ಕೆಲಸ ಮಾಡಬೇಕು ಎಂದು ರೈತರು ಆಗ್ರಹಿಸಿದರು.
ಸ್ಥಳಕ್ಕೆ ತಹಸೀಲ್ದಾರ್ ಎರ‌್ರಿಸ್ವಾಮಿ ಪಿ.ಎಸ್. ಅವರು ಭೇಟಿ ನೀಡಿ ರೈತರಿಂದ ಮನವಿ ಸ್ವೀಕರಿಸಿದರು. ರೈತರಾದ ಮಲ್ಲಿಕಾರ್ಜುನಗೌಡ ಪಾಟೀಲ, ಚಿನ್ನಪ್ಪಗೌಡ ಮೇಟಿ, ಬಸವರಾಜ ಗುರನಳ್ಳಿ, ಹನುಮಂತಗೌಡ ಪಾಟೀಲ, ಮಹೇಶ ಕೊಂಚಿಗೇರಿ, ನಿಂಗನಗೌಡ ಪಾಟೀಲ, ಮಹಾಂತೇಶ ಕಲಾಲ, ಶಿವಪ್ಪ ತಳವಾರ, ಸುರೇಶ ಕರದಾಣಿ, ಮಹೇಶಪ್ಪ ಭಜಂತ್ರಿ, ರತ್ನವ್ವ ಲಮಾಣಿ, ವೀರನಗೌಡ ಮೇಟಿ, ಪ್ರಭು ಹರ್ಲಾಪುರ, ಪರಮೇಶಪ್ಪ ರಾಜೂರು ಇತರರು ಇದ್ದರು.