ಜಿಲ್ಲೆ

ಹೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ

ರವಿ ಎಸ್. ಬಳೂಟಗಿ

ಶಿರೋಳ: ಕಪ್ಪಲಿ, ಕಲ್ಲಾಪುರ, ಕಿತ್ತಲಿ, ರಡ್ಡೇರನಾಗನೂರ ಗ್ರಾಮಗಳ ರೈತರು ಕೃಷಿ ಪಂಪ್‌ಸೆಟ್‌ಗಳಿಗೆ ರಾತ್ರಿ ಬದಲು ಹಗಲಿನಲ್ಲಿ ನಿರಂತರವಾಗಿ ತ್ರೀಫೇಸ್ ವಿದ್ಯುತ್ ನೀಡಬೇಕು ಎಂದು ಆಗ್ರಹಿಸಿ ಇಲ್ಲಿನ ವಿದ್ಯುತ್ ಘಟಕದ ಮುಂದೆ ಪ್ರತಿಭಟಿಸಿದರು.

ಸ್ಥಳಕ್ಕೆ ಆಗಮಿಸಿದ ಹೆಸ್ಕಾಂನ ರೋಣ ಎಇ ಇಂಜಿನಿಯರ ರವಿ ಕಿರಣ, ನರಗುಂದ ಇಂಜಿನಿಯರ್‌ಗಳಾದ ಕುಂದಾವರ, ಪ್ರಕಾಶ ಸರಿಕಾದ, ಹಗಲು ಆರು ತಾಸು ಪಂಪ್‌ಸೆಟ್‌ಗಳಿಗೆ ವಿದ್ಯುತ್ ನೀಡುತ್ತೇವೆ ಎಂದು ಭರವಸೆ ನೀಡಿದರು.

ರೈತ ಮುಖಂಡ ನಾಗನಗೌಡ ತಿಮ್ಮನಗೌಡ್ರ, ದ್ಯಾವನಗೌಡ ಪಾಟೀಲ, ಲಕ್ಷಣ ಕರಜಿಕಟ್ಟಿ, ಹನುಮಂತಗೌಡ ತಿರಕನಗೌಡ್ರ, ಈರಣ್ಣ ಕರಕಿಕಟ್ಟಿ, ರಾಮನಗೌಡ ಗಿರಿಯಪ್ಪಗೌಡ್ರ, ಈಶಪ್ಪ ಕರಕಿಕಟ್ಟಿ, ಗಿರೀಶ ನವಲಗುಂದ, ಶಿವಾನಂದ ಯಾಬನ್ನವರ, ಸಂಗಯ್ಯ ಹೊಸಮನಿ,ತಿಮ್ಮನಗೌಡ ಮುಳಗುಂದ, ಸಂಗಪ್ಪ ಚವಡಿ, ಯೋಗಪ್ಪ ಶಾಂತಗೇರಿ ಇತರರಿದ್ದರು.