ಮದ್ದೂರು ಪುರಸಭೆಯಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಿ.ಎಂ.ಮನೀಷ್ ಅವರನ್ನು ಏಕಾಏಕಿ ಪುರಸಭಾ ಆಡಳಿತ ಮಂಡಳಿ ತೆಗೆದು ಹಾಕಿರುವ ಕ್ರಮ ಸರಿಯಲ್ಲ ಎಂದು ಆರೋಪಿಸಿ ದಲಿತ ಸಂಘಟನೆಗಳ ಸಮನ್ವಯ ಸಮಿತಿ ವತಿಯಿಂದ ಧರಣಿ ನಡೆಸಲಾಯಿತು. 
ಜಿಲ್ಲೆ

ಮದ್ದೂರು ಪುರಸಭೆ ಕಚೇರಿ ಮುಂದೆ ಪ್ರತಿಭಟನೆ

ಮದ್ದೂರು: ಪುರಸಭೆಯಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಿ.ಎಂ.ಮನೀಷ್ ಅವರನ್ನು ಏಕಾಏಕಿ ಪುರಸಭಾ ಆಡಳಿತ ಮಂಡಳಿ ತೆಗೆದು ಹಾಕಿರುವ ಕ್ರಮ ಸರಿಯಲ್ಲ ಎಂದು ಆರೋಪಿಸಿ ದಲಿತ ಸಂಘಟನೆಗಳ ಸಮನ್ವಯ ಸಮಿತಿ ವತಿಯಿಂದ  ಪುರಸಭಾ ಕಚೇರಿ ಆವರಣದಲ್ಲಿ  ಪ್ರತಿಭಟನೆ ನಡೆಯಿತು.

ಸಮಿತಿ ಅಧ್ಯಕ್ಷ ಶಂಕರ್ ಮಾತನಾಡಿ, ಸಿ.ಎಂ.ಮನೀಷ್ ಅವರ ಮೇಲೆ ದಾಖಲಾಗಿರುವ ಸುಳ್ಳು ದೂರು ಪ್ರಕರಣವನ್ನು ವಜಾಗೊಳಿಸಿ ಈ ಕೂಡಲೇ ಅವರನ್ನು ಕೆಲಸಕ್ಕೆ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.

ದಲಿತ ಸಂಘಟನೆಗಳ ಸಮನ್ವಯ ಸಮಿತಿ ಹಿರಿಯ ಉಪಾಧ್ಯಕ್ಷರಾದ ಚಿಕ್ಕರಸಿನಕೆರೆ ಮೂರ್ತಿ, ಡಿ.ಕೆ.ಕೃಷ್ಣ, ರಾಜ್ಯ ಸಂಚಾಲಕ ಸೋಮನಹಳ್ಳಿ ಅಂದಾನಿ, ಬಿಎಸ್‌ಪಿ ತಾಲೂಕು ಅಧ್ಯಕ್ಷ ಬೋರಯ್ಯ, ದಲಿತ ಸಂಘರ್ಷ ಸಮಿತಿಯ ಶಿವು, ಮುಖಂಡರಾದ ಸ್ವಾಮಿ, ಪುಟ್ಟರಾಮು, ಗೋವಿಂದರಾಜು, ಸುಂದರೇಶ್, ಅಂಬರೀಶ್, ಎಂ.ಶಿವು, ಶ್ರೀನಿವಾಸ್, ರವಿ, ಕುಮಾರ್, ಮೋಹನ್, ಸ್ವಾಮಿ, ಶೇಖರ್, ದಾಕ್ಷಾಯಿಣಿ ಇದ್ದರು.