ಜಿಲ್ಲೆ

ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಜ.3ರಂದು ಬಳ್ಳಾರಿಯಲ್ಲಿ ಬೃಹತ್ ಮೆರವಣಿಗೆ

ಬಳ್ಳಾರಿ: ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಜ.3ರಂದು ಬೆಳಗ್ಗೆ 10ಗಂಟೆಗೆ ನಗರದಲ್ಲಿ ಬೃಹತ್ ಮೆರವಣಿಗೆ ಆಯೋಜಿಸಲಾಗಿದೆ ಎಂದು ದೇಶ ಭಕ್ತ ನಾಗರಿಕರ ವೇದಿಕೆಯ ಬಳ್ಳಾರಿ ಜಿಲ್ಲಾಧ್ಯಕ್ಷ ರಾಘವೇಂದ್ರ ಹೇಳಿದರು.

ಅಂದು ಬೆಳಗ್ಗೆ 10ಗಂಟೆಗೆ ನಗರದ ನಾರಾಯಣರಾವ ಪಾರ್ಕ್ ನಿಂದ ಮೆರವಣಿಗೆ ಆರಂಭಿಸಿ ರಾಯಲ್ ಸರ್ಕಲ್ ನಲ್ಲಿ ಸೇರಿದ ನಂತರ ಬೃಹತ್ ಸಭೆ ನಡೆಸಿ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ವಿಸ್ತಾರವಾಗಿ ಸಂದೇಶ ನೀಡಲು ಸಭೆ ಆಯೋಜಿಸಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಾಯ್ದೆಯ ವಿರುದ್ಧ ಕೆಲ ಸಂಘಟನೆ, ಪಕ್ಷಗಳು ಅಪಪ್ರಚಾರ ಮಾಡುತ್ತಿರುವುದರಿಂದ ಭಾರತೀಯರೆಲ್ಲರ ಹಿತ ಕಾಪಾಡಬೇಕಾದ ಕಾಯ್ದೆ ಕುರಿತು ಜನರಲ್ಲಿ ತಪ್ಪು ಅಭಿಪ್ರಾಯ ಮೂಡುತ್ತಿದೆ.ಈ ನಿಟ್ಟಿನಲ್ಲಿ ತಿದ್ದುಪಡಿ ಕಾಯ್ದೆ ಪೌರತ್ವ ನೀಡುತ್ತದೆ ಹೊರತು ಪೌರತ್ವ ಕಿತ್ತುಕೊಳ್ಳುವುದಿಲ್ಲ.ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಲ್ಲಿ ಮತೀಯ ಕಿರುಕ್ಕೊಳಗಾದ ಹಿಂದು, ಬೌದ್ಧ, ಜೈನ್, ಸಿಖ್, ಪಾರ್ಸಿ ಮತ್ತು ಕ್ರಿಶ್ಚಿಯನ್ ಮತ ಧರ್ಮದವರು ಭಾರತದ ಪೌರತ್ವ ಪಡೆಯಲು ಸುಲಭವಾಗುವಂತೆ ಮಾಡಲು ಜಾರಿಗೆ ತಂದಿರುವ ಕಾಯ್ದೆಯಾಗಿದೆ ಎಂಬುದನ್ನು ಜನರಿಗೆ ಮೆರವಣಿಗೆ, ಸಭೆ ಮೂಲಕ ತಿಳಿಸಿಕೊಡಲಾಗುವುದು ಎಂದರು.

ಸಂಘಟನೆಯ ಕೆ. ಶ್ರೀರಾಮುಲು, ಕೃಷ್ಣಾಜಿರಾವ್, ಮೃತ್ಯುಂಜಯಸ್ವಾಮಿ, ಕೆ.ಮಲ್ಲೇಶ ಸೇರಿ ಇತರರು ಇದ್ದರು.