ಜಿಲ್ಲೆ

ಭೋವಿ ಯುವ ವೇದಿಕೆಯಿಂದ ಪ್ರತಿಭಟನೆ

ಮಂಜುನಾಥ ಅಂಗಡಿ

ಧಾರವಾಡ: ತಾಲೂಕಿನ ತಡಕೋಡ ಗ್ರಾಮದ ರತ್ನವ್ವ ಹೆಂಡಗಾರ ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸಲು ಆಗ್ರಹಿಸಿ ಅಖಿಲ ಕರ್ನಾಟಕ ಭೋವಿ ಯುವ ವೇದಿಕೆ ನೇತೃತ್ವದಲ್ಲಿ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಕಡಪಾ ಮೈದಾನದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ನೂರಾರು ಭೋವಿ ವಡ್ಡರ ಸಮÁಜ ಬಾಂಧವರು, ಜ್ಯುಬಿಲಿ ವೃತ್ತ್ತ, ಕೋರ್ಟ್ ವೃತ್ತ ಮÁರ್ಗವಾಗಿ ಜಿಲ್ಲಾಽಕಾರಿ ಕಚೇರಿಗೆ ತೆರಳಿ ಕೆಲಕಾಲ ಪ್ರತಿಭಟಿಸಿದರು.
ರತ್ನವ್ವ ಹೆಂಡಗಾರ ಅವರನ್ನು ಅದೇ ಗ್ರಾಮದವರು ಕೊಲೆ ಮಾಡಿದ್ದು, ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಆದರೆ, ಠಾಣೆಯ ಅಽಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಮೃತ ರತ್ನವ್ವಳ ಪುತ್ರಿ ದ್ಯಾಮವ್ವಳ ಮೇಲೂ ಹಲ್ಲೆ ಮಾಡಿ ಜೀವ ಬೇದರಿಕೆ ಹಾಕಿದ್ದಾರೆ. ನಿತ್ಯವೂ ಕಿರುಕುಳ ನೀಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ರತ್ನವ್ವ ಹೆಂಡಗಾರ ಕೊಲೆಯ ಆರೋಪಿಗಳನ್ನು ಬಂಽಸಬೇಕು, ಕರ್ತವ್ಯಲೋಪ ಎಸಗಿದ ಪೊಲೀಸ್ ಅಽಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಽಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ರವಾನಿಸಿದರು.
ಲಕ್ಷ್ಮಣ ದೊಡ್ಡಮನಿ, ಬಸವರಾಜ ಆನೆಗುಂದಿ, ದ್ಯಾಮವ್ವ ವಡ್ಡರ, ಶಿಲ್ಪಾ ಹಿರೇಮನಿ, ಮಂಜುನಾಥ ಹಿರೇಮನಿ, ಶ್ರೀನಿವಾಸ ಅರಳ್ಳಿ, ರಾಜೇಶ್ವರಿ ಮನಸೂರ ಹಾಗೂ ಭೋವಿ ಸಮÁಜದ ನೂರಾರು ಜನ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.