ಜಿಲ್ಲೆ

ನೊಂದ ಕುಟುಂಬಗಳಿಗೆ ಪರಿಹಾರಕ್ಕಾಗಿ ಪ್ರತಿಭಟನೆ

Chitradurga

ಚಿತ್ರದುರ್ಗ: ನಗರದಲ್ಲಿ ಈಚೆಗೆ ಆದ ಅಪಘಾತಗಳಲ್ಲಿ ಏಳು ಜನರು ಮೃತಪಟ್ಟಿದ್ದು, ಇವರ ಸಾವಿಗೆ ನಗರದಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿರುವ ರೋಡ್ ಡಿವೈಡರ್‌ಗಳು ಕಾರಣವೆಂದು ಆರೋಪಿಸಿ, ಮೃತಪಟ್ಟಿರುವ ಜನರ ಕುಟುಂಬಗಳಿಗೆ ಪರಿಹಾರ ವಿತರಿಸುವಂತೆ ಆಗ್ರಹಿಸಿ ರಾಷ್ಟ್ರೀಯ ಪ್ರಬುದ್ಧ ಸೇನೆ ಕಾರ‌್ಯಕರ್ತರು ಮಂಗಳವಾರ ವೀರ ವನಿತೆ ಒನಕೆ ಓಬವ್ವ ವೃತ್ತದಲ್ಲಿ ಧರಣಿ ನಡೆಸಿದರು.

ಅವೈಜ್ಞಾನಿಕ ಡಿವೈಡರ್‌ಗಳು ಕಳಪೆಯಾಗಿವೆ. ಇದಕ್ಕೆ ಸಂಬಂಧಿಸಿದ ಇಂಜಿನಿಯರ್, ಗುತ್ತಿಗೆದಾರರು ನೇರ ಹೊಣೆಯಾಗಿದ್ದಾರೆ. ಸಿಸಿ ರಸ್ತೆ ನಿರ್ಮಾಣ ಗುಣಮಟ್ಟದ ತನಿಖೆ ನಡೆಸಬೇಕು. ರಸ್ತೆ ನಿರ್ಮಾಣದ ಪ್ಲಾನಿಂಗ್, ಅನುದಾನ, ಗುತ್ತಿಗೆದಾರರು, ಇಂಜಿನಿಯರ್‌ಗಳ ಹೆಸರನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕೆಂದು ಆಗ್ರಹಿಸಿದರು.

ರಾಷ್ಟ್ರೀಯ ಪ್ರಬುದ್ಧ ಸೇನೆ ಅಧ್ಯಕ್ಷ ಸಿ.ಎಲ್.ಅವಿನಾಶ್, ಸಂಚಾಲಕ ಮಂಜಪ್ಪ, ಜಿಲ್ಲಾಧ್ಯಕ್ಷ ಹನುಮಂತರಾಯ, ರುದ್ರೇಶ್, ವಿಶ್ವಾನಂದ, ಅನುಷ್, ಅಶೋಕ್ ಮತ್ತಿತರರು ಪ್ರತಿಭಟನೆಯಲ್ಲಿದ್ದರು.