ಜಿಲ್ಲೆ

ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಸ್ವಾಭಿಮಾನದ ಬೃಹತ್ ಹೋರಾಟ

ಮಂಜುನಾಥ ಅಂಗಡಿ

ವಿಜಯವಾಣಿ ಸುದ್ದಿಜಾಲ ಧಾರವಾಡ
ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಮಾದಿಗರ ಸ್ವಾಭಿಮಾನದ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿತ್ತು.
ಕಳೆದ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಸದಾಶಿವ ಆಯೋಗದ ವರದಿ ಜಾರಿಗೊಳಿಸುವ ಭರವಸೆ ನೀಡಿತ್ತು. ಒಂದೂವರೆ ವರ್ಷವಾದರೂ ಕಾಂಗ್ರೆಸ್ ಸರ್ಕಾರ ಭರವಸೆ ಈಡೇರಿಸಿಲ್ಲ. ನ್ಯಾಯಯುತ ಒಳ ಮೀಸಲಾತಿ ಹಕ್ಕಿಗಾಗಿ ಅನೇಕ ಹೋರಾಟಗಳನ್ನು ಕೈಗೊಂಡಿರುವ ಸಮುದಾಯದ ಜನರ ತಾಳ್ಮೆ ಪರೀಕ್ಷಿಸಬಾರದು. ನ್ಯಾಯಾಲಯದ ಆದೇಶದಂತೆ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ರಾಜ್ಯ ಸರ್ಕಾರ ಕೂಡಲೇ ಜಾರಿ ಮಾಡಬೇಕು ಎಂದು ಸಮಿತಿಯ ಮುಖಂಡರು ಆಗ್ರಹಿಸಿದರು.
ನಗರದ ಕಲಾಭವನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪಾದಯಾತ್ರೆ ನಡೆಸಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಮೂಲಕ ಸರ್ಕಾರಕ್ಕೆ ಮನವಿ ರವಾನಿಸಿದರು.
ಶಿವಶರಣ ಶ್ರೀ ಗದಿಗೆಜ್ಜಯ್ಯ, ಶ್ರೀ ಶಿವಮೂರ್ತಿ ಸ್ವಾಮೀಜಿ, ಶ್ರೀ ರಮಾನಂದ ಸ್ವಾಮೀಜಿ, ಹುಚ್ಚಯ್ಯ ಸ್ವಾಮೀಜಿ, ಮರುಳಸಿದ್ಧೇಶ್ವರ ಸ್ವಾಮೀಜಿ, ಶ್ರೀ ಆನಂದಯ್ಯ ಸ್ವಾಮೀಜಿ, ಮಾಜಿ ಸಚಿವ ಹನುಮಂತಪ್ಪ ಅಲ್ಕೋಡ, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ರಾಜ್ಯ ಅಹಿಂದ ಎಸ್‌ಸಿ- ಎಸ್‌ಟಿ ಘಟಕದ ಅಧ್ಯಕ್ಷ ವೆಂಕಟೇಶ ಸಗಬಾಲ, ಎಚ್.ಎನ್. ಬಡಿಗೇರ, ಅಶೋಕ ದೊಡ್ಡಮನಿ, ಕರೆಪ್ಪ ಮಾದರ, ಬಸಪ್ಪ ಮಾದರ, ಅರ್ಜುನ ಪತ್ರೆಣ್ಣವರ, ಮೋಹನ ಹಿರೇಮನಿ, ಮಹೇಶ ಹುಲ್ಲೆನ್ನವರ, ಶಂಕರ ದೊಡ್ಡಮನಿ, ಕಲ್ಮೇಶ ಹಾದಿಮನಿ, ಡಾ. ಶಿವಸೋಮಣ್ಣ ನಿಟ್ಟೂರ, ರಂಗಪ್ಪ ಮÁದರ, ಹನಮಂತ ಮಾರಡಗಿ, ಇತರರಿದ್ದರು.