ಕಲಘಟಗಿ: ನ್ಯಾಯಮೂರ್ತಿ ನಾಗಮೋಹನದಾಸ ಆಯೋಗವು ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ಒಳಮೀಸಲಾತಿ ವರದಿ ಅವೈಜ್ಞಾನಿಕವಾಗಿದ್ದು, ಬಹುಸಮಾಜಕ್ಕೆ ಅನ್ಯಾಯವಾಗಿದೆ. ಈ ವರದಿಯನ್ನು ಕೂಲಂಕಷವಾಗಿ ಪರಿಗಣಿಸಿ ಬಂಜಾರ, ಭೋವಿ, ವಡ್ಡರ, ಕೊರವ, ಕೊರಚ ಸಮುದಾಯಗಳಿಗೆ ನ್ಯಾಯಯುತವಾದ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿ ವಿವಿಧ ಸಮಾಜದವರು ಪಟ್ಟಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಎಪಿಎಂಸಿಯಿಂದ ಬಂಜಾರ, ಭೋವಿ, ವಡ್ಡರ, ಕೊರವ, ಕೊರಚ ಸಮಾಜದವರು ಬಮ್ಮಿಗಟ್ಟಿ ಕ್ರಾಸ್, ಆಂಜನೇಯ ಸರ್ಕಲ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಸಂಚಾರ ತಡೆದು ಅರೆಬೆತ್ತಲೆಯಾಗಿ ಉರುಳು ಸೇವೆ ಮಾಡಿ ಪ್ರತಿಭಟನೆ ನಡೆಸಿದರು.
ಬಳಿಕ ತಹಸೀಲ್ದಾರ್ ಕಚೇರಿಗೆ ತೆರಳಿ ತಹಸೀಲ್ದಾರ್ ಬಸವರಾಜ ಹೊಂಕಣ್ಣವರ ಮೂಲಕ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಸಲ್ಲಿಸಿದರು. ನಾಗಮೋಹನದಾಸ ಆಯೋಗದ ವರದಿಯಲ್ಲಿ ನಮ್ಮ ಸಮುದಾಯಗಳಿಗೆ ನೀಡಿರುವ ಶೇ. 5ರಷ್ಟು ಮೀಸಲಾತಿಯನ್ನು ಶೇ. 7ಕ್ಕೆ ಏರಿಸಬೇಕು. ಒಳಮೀಸಲಾತಿ ವರ್ಗೀಕರಣದಲ್ಲಿ ಸ್ಪರ್ಶ ಹಾಗೂ ಅಸ್ಪರ್ಶ ಪದ ಬಳಕೆ ಮಾಡಿದ್ದು ಕಾನೂನು ಬಾಹಿರವಾಗಿದೆ ಎಂದು ದೂರಿದರು.
ರಾಮಣ್ಣ ಶಿಗ್ಲಿ, ಅರ್ಜುನ ಲಮಾಣಿ, ವಾಸು ಲಮಾಣಿ, ರಾಮಣ್ಣ ಬಂಡಿವಡ್ಡರ, ಮೌನೇಶ ಲಮಾಣಿ, ಪಾಡು ಲಮಾಣಿ, ನಾಗೇಶ ಇಟಗಿ, ದೇವರಾಜ ಲಮಾಣಿ, ಸುರೇಶ ಭೋವಿ, ಶಿವಾಜಿ ವಡ್ಡರ, ಜೀವನ ಲಮಾಣಿ, ಶಿವಪ್ಪ ಲಮಾಣಿ, ಕೃಷ್ಣ ರಾಠೋಡ, ರತ್ನಪ್ಪ ಲಮಾಣಿ, ಗಂಗಾ ರಾಠೋಡ, ಶಿವಪ್ಪ ಭಜಂತ್ರಿ, ನವೀನ ಭಜಂತ್ರಿ, ಯಮಲವ್ವ ಲಮಾಣಿ, ರಮೇಶ ಭಜಂತ್ರಿ, ಲಕ್ಷ್ಮಣ ದೊಡ್ಡಮನಿ, ಕೃಷ್ಣ ನಾಯಕ, ಶಿವಪ್ಪ ಲಮಾಣಿ, ರಾಮಚಂದ್ರ ಲಮಾಣಿ, ಅನೀಲ ಪಮ್ಮಾರ, ಧನು ನಾಯಕ, ಲಚ್ಚಪ್ಪ ನಾಯಕ, ಠೋಪಣ್ಣ ಲಮಾಣಿ, ವಿಠ್ಠಲ ಲಮಾಣಿ, ನಾಗರಾಜ ಲಮಾಣಿ, ಯಲ್ಲಪ್ಪ ಲಮಾಣಿ, ಸುರೇಶ ನಾಯಕ, ರಾಮಣ್ಣ ಲಮಾಣಿ, ಶಿವಾಜಿ ಲಮಾಣಿ, ಜೈ ಭೀಮ ಬಂಜಾರ ಯುವಸೇನೆಯ ಪದಾಧಿಕಾರಿಗಳು ಇದ್ದರು.
ಒಳಮೀಸಲಾತಿ ವರದಿಯು ಬಂಜಾರ, ಭೋವಿ, ವಡ್ಡರ, ಕೊರವ, ಕೊರಚ ಸಮಾಜಕ್ಕೆ ಕಂಟಕವಾಗಿದೆ. ಆದ್ದರಿಂದ ಸರ್ಕಾರ ನ್ಯಾಯಮೂರ್ತಿ ನಾಗಮೋಹನದಾಸ ಆಯೋಗ ನೀಡಿರುವ ವರದಿಯನ್ನು ಕೂಲಂಕಷವಾಗಿ ಪರಿಗಣಿಸಿ ಎಲ್ಲ ಸಮಾಜಗಳಿಗೆ ನ್ಯಾಯ ಒದಗಿಸಬೇಕು. | ಲಕ್ಷ್ಮಣ ಭೋವಿ ರಾಜ್ಯಾಧ್ಯಕ್ಷ ಭೋವಿ ಸಮಾಜ ಬಂಜಾರ ಸಮಾಜದ ಜನರು ಗುಡ್ಡಗಾಡುಗಳಲ್ಲಿ ಉಪಜೀವನಕ್ಕೆ ಅನೇಕ ಕೆಲಸ ಕಾರ್ಯ ಮಾಡುತ್ತ ಬದುಕುತ್ತಿದ್ದಾರೆ. ಈ ಮೀಸಲಾತಿಯಿಂದ ಮಕ್ಕಳ ಭವಿಷ್ಯಕ್ಕೆ ಅಲ್ಪಸ್ವಲ್ಪವಾದರೂ ಅನುಕೂಲವಾಗಿತ್ತು. ಆದರೆ, ನ್ಯಾಯಮೂರ್ತಿ ನಾಗಮೋಹನದಾಸ ಆಯೋಗದ ವರದಿಯಿಂದ ಮುಂದಿನ ಜೀವನ ನಡೆಸುವುದು ದುಸ್ತರವಾಗಿದೆ. | ಪ್ರಕಾಶ ಲಮಾಣಿ ಪ್ರಧಾನ ಕಾರ್ಯದರ್ಶಿ, ಬಂಜಾರ ಸಮಾಜ