ಜಿಲ್ಲೆ

ಇನ್​ಸ್ಪೆಕ್ಟರ್ ಅಮಾನತಿಗೆ ಆಗ್ರಹಿಸಿ ಪ್ರತಿಭಟನೆ

ಹುಬ್ಬಳ್ಳಿ: ಎಪಿಎಂಸಿ- ನವನಗರ ಠಾಣೆ ಪೊಲೀಸರು ಮತ್ತು ವಕೀಲ ವಿನೋದ ಪಾಟೀಲ ನಡುವಿನ ಜಟಾಪಟಿ ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಇನ್​ಸ್ಪೆಕ್ಟರ್ ಪ್ರಭು ಸೂರಿನ್ ಅವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿ ಹುಬ್ಬಳ್ಳಿ ವಕೀಲರ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಸೋಮವಾರ ಕೋರ್ಟ್ ಆವರಣದ ಎದುರು ಕೆಲಕಾಲ ಪ್ರತಿಭಟನೆ ನಡೆಸಿದರು.

ವಕೀಲ ವಿನೋದ ಪಾಟೀಲರ ಕೈಗೆ ಬೇಡಿ ಹಾಕಿಕೊಂಡು ಕರೆದುಕೊಂಡು ಹೋಗಿದ್ದು ಖಂಡನೀಯ. ಈ ಕೂಡಲೆ ಇನ್​ಸ್ಪೆಕ್ಟರ್ ಸೂರಿನ್ ಅವರನ್ನು ಅಮಾನತುಗೊಳಿಸಿ, ಕಾನೂನು ಕ್ರಮ ಕೈಗೊಳ್ಳಬೇಕು. ಅವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿ ತಹಸೀಲ್ದಾರ್ ಮೂಲಕ ಗೃಹ ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು.

ವಕೀಲರ ಸಂಘದ ಅಧ್ಯಕ್ಷ ಅಶೋಕ ಬಳಿಗಾರ, ಪ್ರಧಾನ ಕಾರ್ಯದರ್ಶಿ ಗುರು ಹಿರೇಮಠ, ಅಶೋಕ ಅಣವೇಕರ, ಸಂಜು ಬಡಸ್ಕರ, ಪ್ರಭು ವಿರಕ್ತಮಠ, ಶೋಭಾ ಪವಾರ, ಮತ್ತಿತರರು ಪಾಲ್ಗೊಂಡಿದ್ದರು.

ಮಧ್ಯಂತರ ಜಾಮೀನು

ಹುಬ್ಬಳ್ಳಿ: ಎಪಿಎಂಸಿ- ನವನಗರ ಠಾಣೆ ಪೊಲೀಸರೊಂದಿಗೆ ಜಟಾಪಟಿ ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದ ವಕೀಲ ವಿನೋದ ಪಾಟೀಲ, ರೌಡಿಶೀಟರ್ ಪ್ರವೀಣ ಪೂಜಾರಿ ಹಾಗೂ ಮಲ್ಲಯ್ಯ ಹಿರೇಮಠ ಅವರಿಗೆ 3ನೇ ಹೆಚ್ಚುವರಿ ದಿವಾಣಿ ಮತ್ತು ಜೆಎಂಎಫ್​ಸಿ ಹಿರಿಯ ವಿಭಾಗ ನ್ಯಾಯಾಲಯ ಷರತ್ತುಬದ್ಧ ಮಧ್ಯಂತರ ಜಾಮೀನು ನೀಡಿದೆ. ನ್ಯಾಯಾಧೀಶೆ ಕುಮಾರಿ ಸುಜಾತಾ ಪ್ರಕರಣದ ವಿಚಾರಣೆ ನಡೆಸಿ ಆದೇಶ ಮಾಡಿದ್ದಾರೆ.