ವಕ್ಫ್ ಮಸೂದೆ ತಿದ್ದುಪಡಿ ರದ್ದತಿಗೆ ಆಗ್ರಹಿಸಿ ದೇವರಹಿಪ್ಪರಗಿಯಲ್ಲಿ ಅಂಜುಮನ್ ಇಸ್ಲಾಂ ಕಮಿಟಿ ವತಿಯಿಂದ ಭಾನುವಾರ ಪ್ರತಿಭಟನೆ ನಡೆಯಿತು. ಅಂಜುಮನ್ ಕಮಿಟಿ ಅಧ್ಯಕ್ಷ ಮಹಿಬೂಬ್ ಹುಂಡೇಕಾರ, ಉಪಾಧ್ಯಕ್ಷ ರಫೀಕ್ ಪಾನಪರೋಷ, ರಿಯಾಜ್ ಯಲಗಾರ ಇತರರಿದ್ದರು. 
ಜಿಲ್ಲೆ

ವಕ್ಫ್ ಕಾಯ್ದೆ ರದ್ದತಿಗೆ ಆಗ್ರಹಿಸಿ ಪ್ರತಿಭಟನೆ

ದತ್ತಾತ್ರೇಯ ಪಿ ಕುಲಕರ್ಣಿ

ದೇವರಹಿಪ್ಪರಗಿ: ವಕ್ಫ್ ಕಾಯ್ದೆ ತಿದ್ದುಪಡಿ ರದ್ದುಪಡಿಸಲು ಆಗ್ರಹಿಸಿ ಅಂಜುಮನ್ ಇಸ್ಲಾಂ ಕಮಿಟಿಯಿಂದ ಭಾನುವಾರ ಶಾಂತಿಯುತ ಪ್ರತಿಭಟನೆ ಹಾಗೂ ಬೃಹತ್ ರ‌್ಯಾಲಿ ನಡೆಯಿತು.

ಪಟ್ಟಣದ ಟಿಪ್ಪು ಸುಲ್ತಾನ್ ವೃತ್ತದಲ್ಲಿ ಸಭೆ ಸೇರಿದ ಮುಸ್ಲಿಮರು, ಅಂಬೇಡ್ಕರ್, ಟಿಪ್ಪು ಸುಲ್ತಾನ್ ಭಾವಚಿತ್ರ, ತ್ರಿವರ್ಣ ಹಾಗೂ ಜೈಭೀಮ ಧ್ವಜಗಳೊಂದಿಗೆ ಬೃಹತ್ ಮೆರವಣಿಗೆ ನಡೆಸಿದರು.

ಹೊಸನಗರ, ಬಸ್ ನಿಲ್ದಾಣ ಮೂಲಕ ಡಾ. ಅಂಬೇಡ್ಕರ್ ವೃತ್ತಕ್ಕೆ ಆಗಮಿಸಿ ಅಲ್ಲಿ ಸಭೆ ನಡೆಸಿದರು. ಕಮಿಟಿ ಉಪಾಧ್ಯಕ್ಷ ರಫೀಕ್ ಪಾನಪರೋಷ ಮಾತನಾಡಿ, ವಕ್ಫ್ ತಿದ್ದುಪಡಿ ಮಸೂದೆ ಅಲ್ಪಸಂಖ್ಯಾತರಿಗೆ ಸಂವಿಧಾನ ನೀಡಿರುವ ವಿಶೇಷ ಹಕ್ಕುಗಳನ್ನು ಕಿತ್ತುಕೊಳ್ಳುತ್ತದೆ. ಆದ್ದರಿಂದ ಲೋಕಸಭೆಯಲ್ಲಿ ಅಂಗೀಕರಿಸಿದ ಅಸಂವಿಧಾನಿಕವಾದ ತಿದ್ದುಪಡಿ ಕಾಯ್ದೆಯನ್ನು ರದ್ದುಪಡಿಸಿ ಈ ಹಿಂದೆ ಇದ್ದ ವಕ್ಪ್ ಕಾಯ್ದೆ ಮರುಸ್ಥಾಪಿಸಲು ಆಗ್ರಹಿಸಿದರು.

ಜಾಮೀಯಾ ಮಸೀದಿ ಧರ್ಮಗುರು ಮೌಲಾನಾಅಹ್ಮದ್ ಅಲಿ ಖಾಜಿ, ದಲಿತ ಸಂಘರ್ಷ ಸಮಿತಿಯ ಪ್ರಕಾಶ ಗುಡಿಮನಿ, ಶರಣು ಜಮಖಂಡಿ, ಪಟ್ಟಣ ಪಂಚಾಯಿತಿ ನಾಮನಿರ್ದೇಶನ ಸದಸ್ಯ ರಾಜು ಮೆಟಗಾರ, ದಸ್ತಗೀರ್ ಮುಲ್ಲಾ ಮಾತನಾಡಿದರು. ಬಳಿಕ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.

ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ರಿಯಾಜ್ ಯಲಗಾರ, ಅಂಜುಮನ್ ಕಮಿಟಿ ಅಧ್ಯಕ್ಷ ಮಹಿಬೂಬ್ ಹುಂಡೇಕಾರ, ಪಪಂ ಸದಸ್ಯ ಬಶೀರ್‌ಅಹ್ಮದ್ ಬೇಪಾರಿ, ಕಮಿಟಿ ಕಾರ್ಯದರ್ಶಿ ಅಬ್ದುಲ್‌ಸತ್ತಾರ ಉಪರಘರ, ಹೈದರಸಾಬ್ ಮುಲ್ಲಾ, ಮುನೀರ್‌ಅಹ್ಮದ್ ಮಳಖೇಡ, ಎ.ಡಿ. ಮುಲ್ಲಾ, ಜಬ್ಬಾರ್ ಮೋಮಿನ್, ಬಾಬು ದೇವಣಗಾಂವ, ಹಾಜೀಲಾಲ್ ಮಸಳಿ, ಇಕ್ಬಾಲ್ ವಿಜಯಪುರ, ರಜಾಕ್ ಆಹೇರಿ, ಅಜೀಜ್ ಮರೋಳ, ಇಮ್ತಿಯಾಜ್ ಮುಲ್ಲಾ ಇತರರಿದ್ದರು.