ಜಿಲ್ಲೆ

ಸೋಯಾಬಿನ್ ಖರೀದಿಗೆ ಆಗ್ರಹಿಸಿ ಪ್ರತಿಭಟನೆ

ಮಂಜುನಾಥ ಅಂಗಡಿ

ವಿಜಯವಾಣಿ ಸುದ್ದಿಜಾಲ ಧಾರವಾಡ

ಬೆಂಬಲ ಬೆಲೆ ಖರೀದಿ ಕೇಂದ್ರದಲ್ಲಿ ನೋಂದಾಯಿತ ರೈತರ ಸೋಯಾಬಿನ್ ಫಸಲನ್ನು ಖರೀದಿ ಮಾಡಲು ಆಗ್ರಹಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (ಎಐಕೆಕೆಎಂಎಸ್) ವತಿಯಿಂದ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಕಲಾಭವನದಿಂದ ಮೆರವಣಿಗೆ ನಡೆಸಿ ಜಿಲ್ಲಾಽಕಾರಿ ಕಚೇರಿಗೆ ಬಂದ ರೈತರು ಕೆಲಕಾಲ ಪ್ರತಿಭಟನೆ ನಡೆಸಿದರು.

ಈ ವೇಳೆ ಎಐಕೆಕೆಎಂಎಸ್ ಜಿಲ್ಲಾ ಅಧ್ಯಕ್‌ಎ ದೀಪಾ ಧಾರವಾಡ ಮಾತನಾಡಿ, ಜಿಲ್ಲೆಯ ಪ್ರಮುಖ ಬೆಳೆ ಸೋಯಾಬಿನ್. ದಶಕದ ಹೋರಾಟದ ಫಲವಾಗಿ ಬೆಂಬಲ ಬೆಲೆಯಡಿ ಜಿಲ್ಲೆಯಲ್ಲಿ ಸೋಯಾಬಿನ್ ಖರೀದಿ ಆರಂಭಿಸಲಾಗಿತ್ತು. ಆದರೆ, ರೈತರು ಆನ್‌ಲೈನ್ ಮೂಲಕ ನೋಂದಣಿ ಮಾಡಿಸಿದ್ದಾರೆ. ಕೆಲ ದಿನ ಆರಂಭವಾಗಿದ್ದ ಖರೀದಿ ಪ್ರಕ್ರಿಯೆಯನ್ನು ಏಕಾಏಕಿ ಬಂದ್ ಮಾಡಿದ್ದಾರೆ. ಇದರಿಂದ ನೋಂದಾಯಿತ ರೈತರಲ್ಲಿ ಅರ್ಧದಷ್ಟು ಜನರ ಬೆಳೆ ಖರೀದಿಯಾಗಿಲ್ಲ. ಕೂಡಲೇ ಖರೀದಿ ಪ್ರಕ್ರಿಯೆಯನ್ನು ಪುನರ್ ಆರಂಭಿಸಬೇಕು ಎಂದರು.

ಕ್ವಿAಟಾಲ್‌ಗೆ ಕನಿಷ್ಠ 10 ಸಾವಿರ ರೂಪಾಯಿ ದರ ನಿಗದಿಪಡಿಸಬೇಕು. ನೋಂದಣಿ ಮಾಡಿಸಲು ಸರಿಯಾದ ಮಾಹಿತಿ ನೀಡಿ ಹೆಚ್ಚಿನ ಕಾಲಾವಕಾಶ ನೀಡಬೇಕು. ರೋಗಬಾಧೆಗೆ ತುತ್ತಾದ ಬೆಳೆಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಅಪರ ಜಿಲ್ಲಾಽಕಾರಿ ಗೀತಾ ಸಿ.ಡಿ. ಮೂಲಕ ಸರ್ಕಾರಕ್ಕೆ ಮನವಿ ರವಾನಿಸಿದರು.

ಜಿಲ್ಲಾ ಉಪಾಧ್ಯಕ್ಷ ಹನುಮೇಶ ಹುಡೇದ, ಕಾರ್ಯದರ್ಶಿ ಶರಣು ಗೋನವಾರ, ರೈತ ಮುಖಂಡರಾದ ಅಲ್ಲಾವುದ್ದೀನ್ ಅಡ್ಲಿ, ಬಸಪ್ಪ ಅಂಬ್ಲಿಕೊಪ್ಪ, ಮಂಜುನಾಥ ತಿಮಾಪುರ, ಶಿವಾನಂದ ಕುಂದಗೋಳ, ಮಂಜುನಾಥ ಕಟ್ಟಿ, ಶಂಕ್ರಪ್ಪ ಪಾಟೀಲ, ರಮೇಶಗೌಡ ಪಾಟೀಲ, ಸಿದ್ದಲಿಂಗಪ್ಪ, ಬಸವರಾಜ ಬಾಣದ, ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.