ಹಾನಗಲ್ಲ: ಪಟ್ಟಣದಲ್ಲಿ ಪುರಸಭೆ ಆಸ್ತಿ ಅತಿಕ್ರಮಣ ಹಾಗೂ ಅನಧಿಕೃತ ಕಟ್ಟಡ ನಿಮಾಣ ವಿರೋಧಿಸಿ ಗುರುವಾರ ಹಿಂದು ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ಸ್ಥಳೀಯ ಕುಮಾರೇಶ್ವರ ಮಠದಿಂದ ಪುರಸಭೆವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ವೇದಿಕೆ ಅಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ್ ಮಾತನಾಡಿ, ಪಟ್ಟಣದ ಪುರಸಭೆ ಕಾರ್ಯåಲಯದ ಎದುರಿನ ಹಳೇ ಬಸ್ ನಿಲ್ದಾಣ ಹಿಂಭಾಗದ ಸರ್ಕಾರಿ ಜಾಗ ಅತಿಕ್ರಮಿಸಿ, ಅಕ್ರಮ ಕಟ್ಟಡ ನಿಮಾಣ ಮಾಡಲಾಗುತ್ತಿದೆ. ಇದನ್ನು ತಡೆಯುವಂತೆ ಮನವಿ ಮಾಡಿದರೂ ಪುರಸಭೆ ಕ್ರಮ ಕೈಗೊಂಡಿಲ್ಲ. 10 ದಿನಗಳೊಳಗಾಗಿ ಕಟ್ಟಡಗಳನ್ನು ತೆರವುಗೊಳಿಸಬೇಕು. ಹೈಕೋರ್ಟ್ ಆದೇಶ ತಪ್ಪಾಗಿ ಅರ್ಥೈಸಿ, ರಚಿಸಿದ ಉತಾರಗಳನ್ನು ರದ್ದುಪಡಿಸಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಸಾಮಾಜಿಕ ಹೋರಾಟಗಾರ ಪ್ರಶಾಂತ ಮುಚ್ಚಂಡಿ ಮಾತನಾಡಿ, ಹಳೆ ಬಸ್ ನಿಲ್ದಾಣದ ಜಾಗದ ಬಗ್ಗೆ ಗೊಂದಲವಿಲ್ಲ. ಹೈಕೋರ್ಟ್ ತೀರ್ಪು ಹಾಗೂ ಪುರಸಭೆ ಮೂಲಕ ಈ ಜಾಗದ ಹಂಚಿಕೆಯ ಒಪ್ಪಂದ ಸರಿಯಾಗಿ ಒಪ್ಪಿ ನಡೆಯುವುದು ನ್ಯಾಯಯುತ. ಆದರೆ, ಇದನ್ನು ಮೀರಿ ಅಧಿಕಾರಿಗಳು ಅತಿಕ್ರಮಣ ಕಟ್ಟಡಕ್ಕೆ ಅನುಕೂಲಕರವಾಗಿ ನಡೆದುಕೊಳ್ಳುತ್ತಿರುವುದು ಸಮಸ್ಯೆ ಹುಟ್ಟು ಹಾಕಿದಂತಾಗಿದೆ. ಇಲ್ಲಿ ಸರ್ಕಾರಿ ಆಸ್ತಿ ಉಳಿಸುವುದು ಹಾಗೂ ಧಾರ್ವಿುಕ ಭಾವನೆಗಳನ್ನು ಕದಡದಂತೆ ನೋಡುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ. ಈ ಎಚ್ಚರಿಕೆ ಇಟ್ಟುಕೊಂಡು ಅಧಿಕಾರಿಗಳು ಕ್ರಮ ಜರುಗಿಸಬೇಕು. ತಪ್ಪು ಸಂದೇಶ ನೀಡಿ ಭಾವನಾತ್ಮಕ ವಿಷಯಗಳನ್ನು ಸಂಘರ್ಷಕ್ಕೆ ಹಚ್ಚಬೇಡಿ ಎಂದು ಎಚ್ಚರಿಕೆ ನೀಡಿದರು.
ಭೋಜರಾಜ ಕರೂದಿ ಮಾತನಾಡಿ, ಸಮಸ್ಯೆ ಸೃಷ್ಟಿಸಿದ ಪುರಸಭೆಯೇ ಪರಿಹಾರ ಒದಗಿಸಬೇಕು ಎಂದರು.
ಪುರಸಭೆ ಮಾಜಿ ಅಧ್ಯಕ್ಷರುಗಳಾದ ನಾಗಪ್ಪ ಸವದತ್ತಿ, ಅನಂತವಿಕಾಸ ನಿಂಗೋಜಿ, ಉಪಾಧ್ಯಕ್ಷ ಗಣೇಶ ಮೂಡ್ಲಿಯವರ, ಕಿರಣ ಮೂಡ್ಲಿಯವರ, ರವಿಚಂದ್ರ ಪುರೋಹಿತ, ಪ್ರವೀಣ ಸುಲಾಖೆ, ರಾಜು ಗೌಳಿ, ರವೀಂದ್ರ ದೇಶಪಾಂಡೆ, ಬಸವರಾಜ ಹಾದಿಮನಿ, ರಾಮು ಯಳ್ಳೂರ, ಎಚ್.ಪ್ರವೀಣಕುಮಾರ, ಚಂದ್ರು ಉಗ್ರಣ್ಣನವರ, ಅಣ್ಣಪ್ಪ ಚಾಕಾಪೂರ, ವಿನಾಯಕ ಕುರುಬರ, ಬಸವರಾಜ ಮಟ್ಟಿಮನಿ, ಎಂ.ಕೆ. ಪಾರಗಾಂವಕರ, ಜಗದೀಶ ಸಿಂಧೂರ, ಅಜಯ ರೂಗಿಶೆಟ್ಟರ, ಕೃಷ್ಣ ಪೂಜಾರ, ಸಂಜಯ ಬೇದ್ರೆ, ಆನಂದ ಗಾಜಿಪುರ, ಸತೀಶ ಬಾಳೂರ ಇತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಪ್ರತಿಭಟನೆ ಬೆಂಬಲಿಸಿ ಹಿಂದುಪರ ಸಂಘಟನೆಗಳ ಅಂಗಡಿಯವರು ಸ್ವಯಂ ಪ್ರೇರಿತವಾಗಿ ಅಂಗಡಿಗಳನ್ನು ಬಂದ್ ಮಾಡಿದ್ದರು.
---ಬಾಕ್ಸ್---
ಅಧಿಕಾರಿಗಳ ಸಭೆ
ಪ್ರತಿಭಟನೆಯ ಬಗ್ಗೆ ಮುಂಚಿತವಾಗಿ ಮಾಹಿತಿ ನೀಡಿದ್ದರಿಂದಾಗಿ ಎಸ್ಪಿ ಅಂಶುಕುಮಾರ, ಎಎಸ್ಪಿ ಸಿ.ಗೋಪಾಲ, ಡಿವೈಎಸ್ಪಿ ಎನ್.ಮಂಜುನಾಥ, ಸಿಪಿಐ ಆರ್. ವೀರೇಶ, ಪಿಎಸ್ಐ ಸಂಪತ್ ಆನಿಕಿವಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು. ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಮಮತಾ ಹೊಸಗೌಡ್ರ, ಸವಣೂರ ಉಪವಿಭಾಗಾಧಿಕಾರಿ ಮೊಹಮ್ಮದ್ ಖಿಜರ್, ತಹಸೀಲ್ದಾರ್ ಎಸ್.ರೇಣುಕಾ, ಪುರಸಭೆ ಮುಖ್ಯಾಧಿಕಾರಿ ವೈ.ಕೆ. ಜಗದೀಶ ಪ್ರತಿಭಟನಾಕಾರರ ಮನವಿ ಸ್ವೀಕರಿಸಿದರು. ಈ ಕುರಿತು ಅಧಿಕಾರಿಗಳು ಪುರಸಭೆ ಕಾರ್ಯåಲಯದಲ್ಲಿ ಎರಡು ಗಂಟೆಗಳ ಕಾಲ ಸಭೆ ನಡೆಸಿದರು. ಆದರೆ, ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೆ ಜಿಲ್ಲಾಧಿಕಾರಿಯೊಂದಿಗೆ ರ್ಚಚಿಸಿ ಸೂಕ್ತ ಕ್ರಮಕ್ಕೆ ಮುಂದಾಗುತ್ತೇವೆ ಎಂದು ತಿಳಿಸಿದರು.
-----
ಫೋಟೋ 1 ಎಚ್ಎನ್ಎಲ್
ಹಾನಗಲ್ಲಿನಲ್ಲಿ ಹಿಂದು ಹಿತರಕ್ಷಣಾ ವೇದಿಕೆಯ ಪ್ರತಿಭಟನೆ ನಂತರ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಮಮತಾ ಹೊಸಗೌಡ್ರ ಅವರಿಗೆ ಮನವಿ ಸಲ್ಲಿಸಿದರು.
ಫೋಟೋ 1 ಎಚ್ಎನ್ಎಲ್ ಎ
ಶೀರ್ಷಿಕೆ : ಹಾನಗಲ್ಲಿನಲ್ಲಿ ಹಿಂದು ಹಿತರಕ್ಷಣಾ ವೇದಿಕೆಯಡಿ ಸಾರ್ವಜನಿಕರು ಪುರಸಭೆ ಅಧಿಕಾರಿಗಳ ವಿರುದ್ಧ ಪ್ರತಿಭಟನಾ ಮೆರವಣಿಗೆ ನಡೆಸಿದರು.