ಧಾರವಾಡ: ಬೆಳೆಹಾನಿ ವರದಿಯನ್ನು ಸಮರ್ಪಕವಾಗಿ ವಿಮಾ ಕಂಪನಿಗೆ ನೀಡಿ ರೈತರಿಗೆ ಮಧ್ಯಂತರ ಪರಿಹಾರ ಕೊಡಿಸಬೇಕು ಎಂದು ಒತ್ತಾಯಿಸಿ ಧಾರವಾಡ ಗ್ರಾಮಾಂತರ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಪದಾಧಿಕಾರಿಗಳು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಪ್ರತಿ ವರ್ಷದಂತೆ ಈ ವರ್ಷವೂ ರೈತರು ಬೆಳೆ ವಿಮೆ ಕಂತು ತುಂಬಿದ್ದಾರೆ. ಜಿಲ್ಲೆಯಲ್ಲಿ 97,406 ಹೆಕ್ಟೇರ್‌ನಲ್ಲಿ ಹೆಸರು, 71,072 ಹೆಕ್ಟೇರ್‌ನಲ್ಲಿ ಗೋವಿನಜೋಳ, 16,276 ಹೆಕ್ಟೇರ್‌ನಲ್ಲಿ ಉದ್ದು, 41,882 ಹೆಕ್ಟೇರ್‌ನಲ್ಲಿ ಸೋಯಾಬೀನ್, 35,880 ಹೆಕ್ಟೇರ್‌ನಲ್ಲಿ ಹತ್ತಿ, 8,635 ಹೆಕ್ಟೇರ್‌ನಲ್ಲಿ ಶೇಂಗಾ ಬಿತ್ತನೆ ಮಾಡಲಾಗಿದೆ. ಶೇ.80ರಷ್ಟು ಬೆಳೆ ನಾಶವಾಗಿವೆ. ಎನ್‌ಡಿಆರ್‌ಎ್, ಎಸ್‌ಡಿಆರ್‌ಎ್ ಅನುದಾನದಡಿ ಪರಿಹಾರ ನೀಡಬೇಕು. ಮಳೆಯಿಂದ ಹಾಳಾದ ಬೆಳೆಗಳ ಬಗ್ಗೆ ವಿಮಾ ಕಂಪನಿಗೆ ಸಂಪೂರ್ಣ ಮಾಹಿತಿ ಒದಗಿಸಿ ರೈತರಿಗೆ ಸಕಾಲದಲ್ಲಿ ಮಧ್ಯಂತರ ವಿಮೆ ಹಣ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ನಿಂಗಪ್ಪ ಸುತಗಟ್ಟಿ, ಬಸವರಾಜ ಕುಂದಗೋಳಮಠ, ರಾಘವೇಂದ್ರ ಪಾಟೀಲ, ಕಲ್ಮೇಶ ಬೇಲೂರು, ಸಂತೋಷ ಜೀವನಗೌಡ್ರ, ಶಶಿಮೌಳಿ ಕುಲಕರ್ಣಿ ಇದ್ದರು.