ಪೆರ್ಲ: ಕಾಟುಕುಕ್ಕೆ ರಸ್ತೆ ಅಭಿವೃದ್ಧಿಗೆ ಒತ್ತಾಯಿಸಿ ಯುಡಿಎಫ್ ಎಣ್ಮಕಜೆ ಪಂಚಾಯಿತಿ ಸಮಿತಿ ನೇತೃತ್ವದಲ್ಲಿ ಪೆರ್ಲ ಪೇಟೆಯಲ್ಲಿ ಪ್ರತಿಭಟನೆ ನಡೆಯಿತು.
ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಮಾತನಾಡಿ, ರಸ್ತೆ ಅಭಿವೃದ್ಧಿಗೆ ಬೇಡಿಕೆ ಇರಿಸಲಾಗಿದ್ದರೂ ರಾಜ್ಯ ಸರ್ಕಾರ ಮತ್ತು ಲೋಕೋಪಯೋಗಿ ಇಲಾಖೆ ಕಡೆಗಣಿಸುತ್ತಾ ಬರುತ್ತಿದೆ. ಪ್ರಯತ್ನಗಳೆಲ್ಲಾ ವ್ಯರ್ಥವಾಗುತ್ತಿದ್ದು ಜನರ ಮತ ಹಾಗೂ ತೆರಿಗೆ ನೀಡಿದ ಹಣದಲ್ಲಿ ಸರ್ಕಾರ ವಾರ್ಷಿಕ ಸಂಭ್ರಮ ಆಚರಿಸಿ ದುಂದು ವೆಚ್ಚ ಮಾಡುತ್ತಿದೆ. ಇನ್ನಾದರೂ ಅಭಿವೃದ್ಧಿ ಕೆಲಸ ಕೈಗೆತ್ತಿಕೊಳ್ಳದಿದ್ದರೆ ವಿಧಾನಸಭೆ ಮುಂದೆ ಧರಣಿ ನಡೆಸಲಾಗುವುದೆಂದು ಎಚ್ಚರಿಸಿದರು.
ಎಣ್ಮಕಜೆ ಗ್ರಾಪಂ ಅಧ್ಯಕ್ಷ ಸೋಮಶೇಖರ್ ಜೆ.ಎಸ್., ಎಣ್ಮಕಜೆ ಕಾಂಗ್ರೆಸ್ ಮಂಡಲಾಧ್ಯಕ್ಷ ಬಿ.ಎಸ್.ಗಾಂಭೀರ್, ಪಂ.ಉಪಾಧ್ಯಕ್ಷೆ ರಮ್ಲ ಇಬ್ರಾಹಿಂ, ನೇತಾರರಾದ ಮಿತ್ತೂರು ಪುರುಷೋತ್ತಮ ಭಟ್, ಎ.ಕೆ.ಶೇರಿಫ್, ಸಿದ್ಧಿಕ್ ಖಂಡಿಗೆ, ಆಮು ಅಡ್ಕಸ್ಥಳ, ಸಿದ್ಧಿಕ್ ವಳಮುಗರು, ಮಾಯಿಲ ನಾಯ್ಕ, ಅಬ್ದುಲ್ ರಸಾಕ್ ನಲ್ಕ, ಸೆಮಿಲ್ ಪೆರ್ಲ, ಆಶ್ರಫ್ ಅಮೆಕ್ಕಳ, ಅಬ್ದುಲ್ಲ ಕುರೆಡ್ಕ, ಇಕ್ಬಾಲ್ ಪೆರ್ಲ, ಹಕೀಂ ಖಂಡಿಗೆ,ಲೋಕನಾಥ, ಯುಡಿಎಫ್ ಸಂಚಾಲಕ ಹಮೀದಾಲಿ ಕಂದಲ್, ಅಬ್ದುಲ್ ರಸಾಕ್ ನೂರ ಪಾಲ್ಗೊಂಡಿದ್ದರು.