ವಿವಾಹಿತೆಯ ಅತ್ಯಾಚಾರ, ಹತ್ಯೆ ಖಂಡಿಸಿ ಆಲ್​ ಇಂಡಿಯಾ ಬಂಜಾರಾ ಸೇವಾ ಸಂದ ನೇತೃತ್ವದಲ್ಲಿ ಮುದ್ದೇಬಿಹಾಳದಲ್ಲಿ ಪ್ರತಿಭಟನೆ ನಡೆಸಲಾಯಿತು. ಬಿ.ಬಿ.ಲಮಾಣಿ, ಸಂತೋಷ ಚವಾಣ, ರವಿ ನಾಯಕ ಇದ್ದಾರೆ. 
ಜಿಲ್ಲೆ

ಅತ್ಯಾಚಾರಿಗೆ ಗಲ್ಲು ಶಿಕ್ಷೆಗೆ ಆಗ್ರಹಿಸಿ ಪ್ರತಿಭಟನೆ

ಮುದ್ದೇಬಿಹಾಳ: ವಿವಾಹಿತೆ, ಒಬ್ಬ ಮಗಳ ತಾಯಿಯ ಮೇಲೆ ಅತ್ಯಾಚಾರ ನಡೆಸಿ, ಹತ್ಯೆಗೈದಿರುವ ಆರೋಪಿಗಳನ್ನು ಬಂಧಿಸಿ ಗಲ್ಲುಶಿೆಗೊಳಪಡಿಸುವಂತೆ ಆಗ್ರಹಿಸಿ ಮತ್ತು ಟನೆ ನಂತರ ಸಂತ್ರಸ್ತರ ಕುಟುಂಬಕ್ಕೆ ಸಾಂತ್ವನ ಹೇಳದ ಹಿರಿಯ ಅಧಿಕಾರಿಗಳ ನಡವಳಿಕೆ ಖಂಡಿಸಿ ಆಲ್​ ಇಂಡಿಯಾ ಬಂಜಾರಾ ಸೇವಾ ಸಂದ ನೇತೃತ್ವದಲ್ಲಿ ವಿವಿಧ ದಲಿತಪರ ಸಂಟನೆಗಳ ಸಹಯೋಗದಲ್ಲಿ ಗುರುವಾರ ಪಟ್ಟಣದಲ್ಲಿ ಬೃಹತ್​ ಪ್ರತಿಭಟನೆ ನಡೆಸಲಾಯಿತು.

ಆಲಮಟ್ಟಿ ರಸ್ತೆಯಲ್ಲಿರುವ ಸಂತ ಸೇವಾಲಾಲ ವೃತ್ತದಿಂದ ಪ್ರಾರಂಭಗೊಂಡ ರ್ಯಾಲಿ ಬಸವೇಶ್ವರ ವೃತ್ತಕ್ಕೆ ಆಗಮಿಸಿ ಟೈರ್​ ಸುಟ್ಟು, ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿತು. ಅಲ್ಲಿಂದ ತಾಲೂಕು ಆಡಳಿತ ಸೌಧವರೆಗೂ ರ್ಯಾಲಿ ನಡೆಸಿ ಕೊಲೆಗಾರರು, ಸಾಂತ್ವನ ಹೇಳದ ಜನಪ್ರತಿನಿಧಿಗಳ, ಹಿರಿಯ ಅಧಿಕಾರಿಗಳ ನಡವಳಿಕೆ ವಿರೋಧಿಸಿ ೂಷಣೆ ಕೂಗಲಾಯಿತು.

ಈ ವೇಳೆ ನಡೆದ ಬಹಿರಂಗ ಸಭೆಯಲ್ಲಿ ಬಂಜಾರಾ ಸಮಾಜದ ಮುಖಂಡರಾದ ಬಿ.ಬಿ.ಪಾಟೀಲ, ರವಿ ನಾಯಕ, ರಾಜು ಜಾಧವ, ಡಿಎಸ್​ಎಸ್​ ಜಿಲ್ಲಾ ಸಂಟನಾ ಸಂಚಾಲಕ ಹರೀಶ ನಾಟಿಕಾರ, ತಾಪಂ ಮಾಜಿ ಅಧ್ಯ ವೈ.ಎಚ್​.ವಿಜಯಕರ್​, ಎಸ್​.ಪಿ.ಸೇವಾಲಾಲ ಇನ್ನಿತರರು ಮಾತನಾಡಿ, ಮಾನವೀಯ ಸಮಾಜ ತಲೆತಗ್ಗಿಸುವಂತಾಗಿದೆ. ಆರೋಪಿಗಳನ್ನು ಕೂಡಲೇ ಬಂಧಿಸಿ ಗಲ್ಲು ಶಿೆ ದೊರಕುವಂತೆ ನೋಡಿಕೊಳ್ಳಬೇಕು. ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಸಂತ್ರಸ್ತ ಮಹಿಳೆ ಕುಟುಂಬಕ್ಕೆ ನೆರವಾಗಬೇಕು ಎಂದರು.

ರವಿ ನಾಯಕ, ಹರೀಶ ನಾಟಿಕಾರ, ಬಿ.ಬಿ.ಲಮಾಣಿ ಮಾತನಾಡಿ, ಸಮಾಜ ಕಲ್ಯಾಣ ಇಲಾಖೆಯ ಯಾರೊಬ್ಬರೂ ಮೃತಳ ಕುಟುಂಬಕ್ಕೆ ಸಾಂತ್ವನದ ಮಾತುಗಳನ್ನು ಹೇಳದಿರುವುದು ವಿಷಾದನೀಯ ಎಂದರು.

ಗ್ರೇಡ್​&2 ತಹಸೀಲ್ದಾರ್​ ಎಸ್​.ಎಚ್​.ಮೆಳ್ಳಿಗೇರಿ ಮೂಲಕ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಸಂದ ತಾಲೂಕು ಅಧ್ಯ ಬಹದ್ದೂರ್​ ರಾಠೋಡ, ಸಂತೋಷ ಚವಾಣ ಹುಲ್ಲೂರ, ಬಿ.ಎಸ್​.ಲಮಾಣಿ, ಲಕ್ಷ$್ಮ್ಮಣ ಲಮಾಣಿ, ವಾಲಪ್ಪ ಲಮಾಣಿ, ಬಸವರಾಜ ಚಿಂತಾಮಣಿ, ಲಕ್ಷಿ$್ಮಬಾಯಿ ಲಮಾಣಿ, ಜ್ಯೋತಿ ಲಮಾಣಿ, ದೇವಕಿ ನಾಯಕ, ಕಮಲಾಬಾಯಿ ಚವಾಣ, ಪರಶುರಾಮ ಮುರಾಳ ಇದ್ದರು.