ಚಡಚಣ ತಾಲೂಕಿನ ಲೋಣಿ ಬಿ.ಕೆ. ಗ್ರಾಮದಲ್ಲಿ ಭೂಮಾಪಕ ಮಹಾಂತೇಶ ಸಜ್ಜನ ಮೇಲೆ ನಡೆದ ಹಲ್ಲೆ ಘಟನೆ ಖಂಡಿಸಿ ಇಂಡಿಯಲ್ಲಿ ಬುಧವಾರ ರಾಜ್ಯ ಸರ್ಕಾರಿ ನೌಕರರ ಸ್ಥಳೀಯ ಘಟಕದಿಂದ ಪ್ರತಿಭಟನೆ ನಡೆಸಿ ಗ್ರೇಡ್-2 ತಹಸೀಲ್ದಾರ್ ಧನಪಾಲಶೆಟ್ಟಿ ದೇವೂರ ಅವರಿಗೆ ಮನವಿ ಸಲ್ಲಿಸಲಾಯಿತು. 
ಜಿಲ್ಲೆ

ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿ ಪ್ರತಿಭಟನೆ

Vijayapura - Desk - Gurappa Lokuri

ಇಂಡಿ: ಚಡಚಣ ತಾಲೂಕಿನ ಲೋಣಿ ಬಿ.ಕೆ. ಗ್ರಾಮದಲ್ಲಿ ಭೂಮಾಪಕ ಮಹಾಂತೇಶ ಸಜ್ಜನ ಮೇಲೆ ಹಲ್ಲೆ ನಡೆದ ಘಟನೆ ಖಂಡಿಸಿ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದಿಂದ ಪಟ್ಟಣ ಮಿನಿ ವಿಧಾನ ಸೌಧ ಎದುರು ಬುಧವಾರ ಪ್ರತಿಭಟನೆ ನಡೆಸಲಾಯಿತು.

ತಾಲೂಕು ಅಧ್ಯಕ್ಷ ಬಸವರಾಜ ರಾವೂರ ಮಾತನಾಡಿ, ಭೂಮಾಪಕ ಮಹಾಂತಪ್ಪ ಸಜ್ಜನ ಮೇಲಿನ ಹಲ್ಲೆಯಿಂದಾಗಿ ಭೂಮಾಪಕರು ಮಾನಸಿಕವಾಗಿ ನೊಂದಿದ್ದಾರೆ. ತಾಲೂಕಿನಲ್ಲಿ ಸರ್ಕಾರಿ ನೌಕರರ ಮೇಲೂ ಹಲ್ಲೆಗಳು ಮೇಲಿಂದ ಮೇಲೆ ನಡೆಯುತ್ತಿವೆ. ಕೂಡಲೇ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಭೂಮಾಪಕರ ಸಂಘದ ತಾಲೂಕು ಅಧ್ಯಕ್ಷ ಉಮನೇಸ ಬಿರಾದಾರ, ರವಿ ಗಿಣ್ಣಿ, ಜಿಲ್ಲಾ ಭೂಮಾಪಕರ ಸಂಘದ ಅಧ್ಯಕ್ಷ ಎ.ಎಚ್. ಮುಲ್ಲಾ, ಗಂಗಾಧರ ಗುಜ್ಜರ, ವಿನಾಯಕ ಕುಲಕರ್ಣಿ ಮಾತನಾಡಿ, ಇಂಥ ದುಷ್ಕೃತ್ಯ ಎಸಗಿದವರ ಮೇಲೆ ಕೂಡಲೇ ಕ್ರಮ ಕೈಗೊಂಡು ಅವರನ್ನು ಉಗ್ರ ಶಿಕ್ಷೆಗೆ ಒಳಪಡಿಸಬೇಕೆಂದು ಆಗ್ರಹಿಸಿದರು.

ಗ್ರೇಡ್-2 ತಹಸೀಲ್ದಾರ ಧನಪಾಲಶೆಟ್ಟಿ ದೇವೂರಗೆ ಮನವಿ ಸಲ್ಲಿಸಲಾಯಿತು.

ಎಸ್.ಆರ್. ಹಿರೇಮಠ, ಬಿ.ಎಸ್. ಮಜ್ಜಗೆ, ಆರ್.ಸಿ. ಲಚ್ಯಾಣ, ವಿರೇಶ ಜೋಕುಮಾರ, ಎಸ್.ವಿ. ಹರಳಯ್ಯ, ಸಿದ್ದಾರ್ಥ ನಾಯಕೊಡಿ, ಗುರುಶಾಂತ ಕುರಲೆ, ವಿಜಯಲಕ್ಷ್ಮೀ ಕಲ್ಯಾಣಕರ, ದ್ರಾಕ್ಷಾಯಿಣಿ ಕಾಚಾಪುರ, ಜ್ಯೋತಿ ಕುಂದರಗಿ, ಲಕ್ಷ್ಮೀ ಶಿವೂರ ಇತರರಿದ್ದರು.