ರಾಜ್ಯದಲ್ಲಿ ಹೆಚ್ಚುತ್ತಿರುವ ದಲಿತ ಸಮುದಾಯದ ಮೇಲಿನ ದೌರ್ಜನ್ಯವನ್ನು ಖಂಡಿಸಿ ಸಿಂಧನೂರು ತಹಸಿಲ್ ಕಚೇರಿ ಮುಂಭಾಗ ಸಿಪಿಐ(ಎಂಎಲ್) ಲಿಬರೇಶನ್ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು. ರಾಜ್ಯ ಸಮಿತಿ ಸದಸ್ಯ ನಾಗರಾಜ ಪೂಜಾರ್, ಸಿಪಿಐ(ಎಂಎಲ್) ತಾಲೂಕು ಕಾರ್ಯದರ್ಶಿ ಬಸವರಾಜ ಬೆಳಗುರ್ಕಿ, ಭಗತ್‌ಸಿಂಗ್ ಆಟೋ ಚಾಲಕರ ಸಂಘದ ಅಧ್ಯಕ್ಷ ಬಸವರಾಜ ಕೊಂಡೆ ಇದ್ದರು. 
ಜಿಲ್ಲೆ

ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ

ಸಿಂಧನೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ದಲಿತ ಸಮುದಾಯದ ಮೇಲಿನ ದೌರ್ಜನ್ಯವನ್ನು ಖಂಡಿಸಿ ಸಿಪಿಐ(ಎಂಎಲ್) ಲಿಬರೇಶನ್ ಕಾರ್ಯಕರ್ತರು ನಗರದ ತಹಸಿಲ್ ಕಚೇರಿ ಮುಂಭಾಗ ಶನಿವಾರ ಪ್ರತಿಭಟನೆ ನಡೆಸಿದರು.


ಕೋಲಾರ ಜಿಲ್ಲೆಯ ಕಂಬಾಲಪಲ್ಲಿಯ ದಲಿತ ಸಮುದಾಯದವರಿಗೆ ಇಂದಿಗೂ ನ್ಯಾಯ ದೊರಕಿಲ್ಲ. ದಲಿತ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ರೋಹಿತ್ ವೇಮುಲ, ಡಾ.ಪಾಯಲ್ ತಡವಿ, ದರ್ಶನ್ ಸೋಲಂಕಿ ಅವರ ಸಾಂಸ್ಥಿಕ ಹತ್ಯೆ ನಡೆದಿದೆ. ಉನ್ನಾವೋ, ಹತ್ರಾಸ್ ಪ್ರಕರಣಗಳಲ್ಲಿ ದಲಿತ ಸಮುದಾಯಗಳ ಮಹಿಳೆಯರು, ಯುವತಿಯರ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


ರಾಜ್ಯ ಸಮಿತಿ ಸದಸ್ಯ ನಾಗರಾಜ ಪೂಜಾರ್, ಸಿಪಿಐ(ಎಂಎಲ್) ತಾಲೂಕು ಕಾರ್ಯದರ್ಶಿ ಬಸವರಾಜ ಬೆಳಗುರ್ಕಿ, ಭಗತ್‌ಸಿಂಗ್ ಆಟೋ ಚಾಲಕರ ಸಂಘದ ಅಧ್ಯಕ್ಷ ಬಸವರಾಜ ಕೊಂಡೆ, ತಾಲೂಕು ಅಧ್ಯಕ್ಷ ಪಂಪಾಪತಿ ಬೆಳಗುರ್ಕಿ, ಆರ್.ಎಚ್.ಕಲ್ಮಂಗಿ, ಕಂಠೆಪ್ಪ ರೈತನಗರ ಕ್ಯಾಂಪ್, ಮಲ್ಲಿಕಾರ್ಜುನ ಕುರುಗೋಡು, ಹಸೇನಪ್ಪ ತಿಡಿಗೋಳ, ಹುಸೇನಪ್ಪ ಕಲ್ಮಂಗಿ ಇನ್ನಿತರರು ಇದ್ದರು.