ವಿಜಯಪುರ:ಮುದ್ದೇಬಿಹಾಳ ತಾಲೂಕಿನ ಬನೋಶಿ ಗ್ರಾಮದ ಯುವತಿ ಮೇಲಿನ ದೌರ್ಜನ್ಯ ಹಾಗೂ ಕೊಲೆ ಖಂಡಿಸಿ ಅಖಿಲ ಭಾರತ ಮಹಿಳಾ ಸಾಂಸತಿಕ ಸಂಟನೆ(ಎಐಎಂಎಸ್ಎಸ್) ಕಾರ್ಯಕರ್ತೆಯರು ಬುಧವಾರ ಪ್ರತಿಭಟನೆ ನಡೆಸಿದರು.ನಗರದ ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ಸಂಟನೆಯ ಕಾರ್ಯಕರ್ತೆಯರು ಬನೋಶಿ ಗ್ರಾಮದಲ್ಲಿ ಮರಕ್ಕೆ ನೇಣು ಹಾಕಿದ ಸ್ಥಿತಿಯಲ್ಲಿ 17 ವರ್ಷದ ಯುವತಿಯ ಶವ ಪತ್ತೆಯಾಗಿರುವ ಭೀಕರ ಟನೆ ಖಂಡಿಸುವ ಜತೆಗೆ ತಪ್ಪಿತಸ್ಥರಿಗೆ ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸುವಂತೆ ಆಗ್ರಹಿಸಿದರು.
ಎಐಎಂಎಸ್ಎಸ್ ಜಿಲ್ಲಾ ಕಾರ್ಯದರ್ಶಿ ಶಿವಬಾಳಮ್ಮ ಕೊಂಡಗೂಳಿ ಮಾತನಾಡಿ, ದೇಶದಲ್ಲಿ ಹೆಣ್ಣುಮಕ್ಕಳ ಮೇಲೆ ನಿರಂತರ ದೌರ್ಜನ್ಯಗಳು ನಡೆಯುತ್ತಿವೆ. ಅದಕ್ಕೆ ನಮ್ಮ ಜಿಲ್ಲೆಯೂ ಹೊರತಾಗಿಲ್ಲ. ಇಂದು ಮಾಧ್ಯಮಗಳೂ ಹೆಣ್ಣು ಮಕ್ಕಳನ್ನು ಭೋಗದ ವಸ್ತು ಎಂಬಂತೆ ಚಿತ್ರಿಸುತ್ತಿವೆ. ವೆಬ್ಸೈಟ್ಗಳಲ್ಲಿ ಅಶ್ಲೀಲತೆ ಪ್ರಚಾರ ಮಾಡುತ್ತಿದ್ದು, ಅದರಿಂದಾಗಿ ಸಮಾಜದಲ್ಲಿ ಸಾಂಸತಿಕ ಅಧ@ಪತನ ನಡೆಯುತ್ತಿದೆ ಎಂದು ಆಕ್ರೋಶ ಹೊರಹಾಕಿದರು.ಈ ಟನೆ ಬಗ್ಗೆ ಸೂಕ್ತ ತನಿಖೆ ನಡೆಸಬೇಕಲ್ಲದೆ, ಅಪರಾಧಿಗಳಿಗೆ ಕಠಿಣ ಶಿೆ ನೀಡಬೇಕೆಂದು ಆಗ್ರಹಿಸಿದ್ದಾರೆ.
ಸಂಟನೆ ಜಿಲ್ಲಾಧ್ಯಕ್ಷೆ ಗೀತಾ ಎಚ್., ಮೀನಾ ಸಿಂಗೆ, ನೀಲಾಂಬಿಕೆ, ಶಶಿಕಲಾ, ಅಮೂಲ್ಯ, ಸುಷ್ಮಿತಾ ಚಲವಾದಿ, ಐಶ್ವರ್ಯ ಜಾಧವ, ಭಾಗ್ಯಲಕ್ಷಿ$್ಮ ಮತ್ತಿತರರಿದ್ದರು.
ಬನೋಶಿ ಗ್ರಾಮದ ಯುವತಿ ಮೇಲಿನ ದೌರ್ಜನ್ಯ ಹಾಗೂ ಕೊಲೆ ಖಂಡಿಸಿ ವಿಜಯಪುರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಎಐಎಂಎಸ್ಎಸ್ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು. ಶಿವಬಾಳಮ್ಮ ಕೊಂಡಗೂಳಿ, ಗೀತಾ ಎಚ್., ಮೀನಾ ಸಿಂಗೆ ಮತ್ತಿತರರಿದ್ದರು.