ಅಣ್ಣಿಗೇರಿ: ಧರ್ಮಸ್ಥಳದ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಸಂದರ್ಶನ ನೀಡಿರುವ ಗಿರೀಶ ಮಟ್ಟೆಣ್ಣವರ ಧಾರ್ವಿುಕ ಭಾವನೆಗೆ ಧಕ್ಕೆ ತರುತ್ತಿದ್ದು, ಕೂಡಲೇ ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪಟ್ಟಣದ ಜೈನ ಸಮಾಜದವರು ಆಗ್ರಹಿಸಿದರು.
ಪಟ್ಟಣದಲ್ಲಿ ಮಂಗಳವಾರ ಪ್ರತಿಭಟನಾ ಮೆರವಣಿಗೆ ನಡೆಸಿದ ಜೈನ ಸಮಾಜದವರು ಕೆಲಕಾಲ ರಸ್ತೆ ಮಧ್ಯದಲ್ಲಿ ಕುಳಿತು ರಸ್ತೆ ಸಂಚಾರ ತಡೆದು ಮಟ್ಟೆಣ್ಣವರ ವಿರುದ್ಧ ಘೊಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಚಂಬಾ ಸುರಕೋಡ ಮಾತನಾಡಿ, ಗಿರೀಶ ಮಟ್ಟೆಣ್ಣವರ ಮೊದಲಿನಿಂದಲೂ ಸಮಾಜಘಾತಕ ವ್ಯಕ್ತಿತ್ವ ಹೊಂದಿದ ವ್ಯಕ್ತಿ. ಸಮಾಜದ ಶಾಂತಿ ಕದಡುವ ಕೆಲಸ ಮಾಡಿದ್ದಾನೆ. ದೇಶದ ಸಂವಿಧಾನ ಮತ್ತು ಕಾನೂನು ಸುವ್ಯವಸ್ಥೆಗೆ ಅಡ್ಡಿ ಪಡಿಸುತ್ತಿರುವ ಧರ್ಮವಿರೋಧಿ ವ್ಯಕ್ತಿ ಆತನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಭಗವಂತಪ್ಪ ಪುಟ್ಟನವರ, ಪ್ರವೀಣ ನಾವಳ್ಳಿ, ಶಿವಪ್ಪ ಬಾಳೋಜಿ, ಅರ್ಜುನ್ ಕಲಾಲ್, ವಿ.ಪಿ. ಗುರಿಕಾರ, ಷಣ್ಮುಖಣ್ಣ ಗುರಿಕಾರ ಇತರರು ಉಪಸ್ಥಿತರಿದ್ದರು.