ಜಿಲ್ಲೆ

ಬಸ್ ನಿಲ್ದಾಣ ಉದ್ಘಾಟನೆಗೆ ಆಗ್ರಹಿಸಿ ಪ್ರತಿಭಟನೆ

ಗದಗ: ನಗರದ ನವೀಕೃತ ಹಳೇ ಬಸ್ ನಿಲ್ದಾಣವನ್ನು ಕೂಡಲೆ ಉದ್ಘಾಟಿಸಬೇಕು ಎಂದು ಒತ್ತಾಯಿಸಿ ಕ್ರಾಂತಿ ಸೇನಾ ಸಂಘಟನೆ ನೇತೃತ್ವದಲ್ಲಿ ಸಾರ್ವಜನಿಕರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಕ್ರಾಂತಿ ಸೇನಾ ಜಿಲ್ಲಾಧ್ಯಕ್ಷ ಬಾಬು ಬಾಕಳೆ ಮಾತನಾಡಿ, ಬಸ್ ನಿಲ್ದಾಣದ ಕಾಮಗಾರಿ ಮುಗಿದು ಹತ್ತು ತಿಂಗಳಾದರೂ ಉದ್ಘಾಟನೆಗೆ ಮುಂದಾಗುತ್ತಿಲ್ಲ. ಜನರ ಸಮಸ್ಯೆಗಳನ್ನು ಅಧಿಕಾರಿಗಳು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜ. 26ರೊಳಗೆ ಬಸ್ ನಿಲ್ದಾಣ ಉದ್ಘಾಟನೆ ಮಾಡದಿದ್ದರೆ ಜ. 29ರಂದು ನಗರದ ವ್ಯಾಪಾರಸ್ಥರು, ವಿವಿಧ ಸಂಘಟನೆ, ಬೀದಿ ಬದಿ ವ್ಯಾಪಾರಸ್ಥರು, ಆಟೋ ಚಾಲಕರು, ವಿದ್ಯಾರ್ಥಿಗಳ ನೇತೃತ್ವದಲ್ಲಿ ಸ್ವಯಂ ಪ್ರೇರಿತವಾಗಿ ಬಸ್ ನಿಲ್ದಾಣ ಉದ್ಘಾಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು. ವಿನೋದ್ ಸಿದ್ಲಿಂಗ, ಅಬ್ದುಲ್ ಮುನಾಫ್ ಮುಲ್ಲಾ, ಶಿವಲಿಂಗ ಶಾಸ್ತ್ರಿ, ಬಸಯ್ಯ ನಂದಿಕೋಲಮಠ, ಕೃಷ್ಣಮೂರ್ತಿ ಬೇವಿನಕಟ್ಟಿ, ಅಂಬಾಲಾಲ್ ಬೇವಿನಕಟ್ಟಿ, ವಿಕಾಸ್ ಜೈನ್, ಅಂಬಾಲಾಲ್ ಹಬೀಬ, ವೆಂಕಟೇಶ ಭಾಂಡಗೆ, ಭೀಮಾ ಕಟಿಗರ, ಭರತ ಮಾರಪ್ಪನವರ, ರಾಮು ಕಬಾಡಿ, ರೋಹಿತ ಅರಸಿದ್ದಿ ಇತರರು ಇದ್ದರು.