ಕನ್ನಡ ರಕ್ಷಣಾ ವೇದಿಕೆ ಅಪ್ಪು ಸೇನೆ, ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ಸಾಗರ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಗುರು ಮದ್ಲೆಸರ, ಎಂ.ಬಿ.ಮಂಜಪ್ಪ, ರೇವಪ್ಪ ಕೆ. ಹೊಸಕೊಪ್ಪ ಇತರರಿದ್ದರು. 
ಜಿಲ್ಲೆ

ತೆಂಗಿನಚಿಪ್ಪಿನ ಹಾರ ಧರಿಸಿ ಪ್ರತಿಭಟನೆ

Shivamogga - Desk - Vinayakumar D B

ಸಾಗರ: ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದನ್ನು ತಕ್ಷಣ ನೀರು ನಿಲ್ಲಿಸುವ ಮೂಲಕ ರಾಜ್ಯದ ರೈತರ ಹಿತ ಕಾಪಾಡುವಂತೆ ಒತ್ತಾಯಿಸಿ ಕನ್ನಡ ರಕ್ಷಣಾ ವೇದಿಕೆ ಅಪ್ಪು ಸೇನೆ, ಕರ್ನಾಟಕ ರಾಜ್ಯ ರೈತ ಸಂಘ ತಾಲ್ಲೂಕು ಶಾಖೆ ಪದಾಧಿಕಾರಿಗಳು ಶುಕ್ರವಾರ ಪ್ರತಿಭಟನೆ ನಡೆಸಿ, ಉಪವಿಭಾಗಾಕಾರಿಗಳಿಗೆ ಮನವಿ ಸಲ್ಲಿಸಿದರು.

ಕಾರ್ಯಕರ್ತರು ಕುತ್ತಿಗೆಗೆ ತೆಂಗಿನಚಿಪ್ಪಿನ ಹಾರ ಧರಿಸಿ ಗಣಪತಿ ದೇವಸ್ಥಾನದಿಂದ ಉಪವಿಭಾಗಾಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
ವೇದಿಕೆ ಜಿಲ್ಲಾಧ್ಯಕ್ಷ ಗುರು ಮದ್ಲೆಸರ, ರೈತ ಸಂಘದ ತಾಲೂಕು ಅಧ್ಯಕ್ಷ ಎಂ.ಬಿ.ಮಂಜಪ್ಪ, ದಲಿತ ಸಂಘರ್ಷ ಸಮಿತಿ ತಾಲೂಕು ಅಧ್ಯಕ್ಷ ರೇವಪ್ಪ ಕೆ.ಹೊಸಕೊಪ್ಪ, ಪ್ರಮುಖರಾದ ಕೆ.ಟಿ.ರಮೇಶ್, ಲಕ್ಷ್ಮಮ್ಮ ಹಿರೇಮನೆ, ಕನ್ನಪ್ಪ, ದಿನೇಶ್, ದೇವು, ರಾಮಕೃಷ್ಣ, ಹಿರಿಯಣ್ಣ ಸಂಗನಕೆರೆ, ಮೋಹನ್, ಮುರಳಿ, ಲೋಕೇಶ್ ಅಡೂರು ಇತರರಿದ್ದರು.