ಜಿಲ್ಲೆ

ತನ್ವೀರ್ ಸೇಠ್ ಬೆಂಬಲಿಗರ ಪ್ರತಿಭಟನೆ

Mysuru

ಮೈಸೂರು: ಶಾಸಕ ತನ್ವೀರ್ ಸೇಠ್ ಅವರು ರಾಜಕೀಯ ನಿವೃತ್ತಿ ಹಿಂಪಡೆದು ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದು ಒತ್ತಾಯಿಸಿ ತನ್ವೀರ್ ಸೇಠ್ ಬೆಂಬಲಿಗರು ಗುರುವಾರ ಪ್ರತಿಭಟನೆ ನಡೆಸಿದರು.

ಉದಯಗಿರಿ ಮುಖ್ಯರಸ್ತೆಯಲ್ಲಿರುವ ಶಾಸಕರ ನಿವಾಸದ ಎದುರು ಜಮಾಯಿಸಿದ ನೂರಾರು ಬೆಂಬಲಿಗರು, ತನ್ವೀರ್ ಸೇಠ್ ಪರ ಜೈಕಾರ ಕೂಗಿದರು.

ಚುನಾವಣೆ ಸ್ಪರ್ಧೆ ಬಗ್ಗೆ ಪಕ್ಷದ ವರಿಷ್ಠರ ನಿರ್ಧಾರಕ್ಕೆ ಬದ್ಧನೆಂದು ಹೇಳುವ ಬದಲಿಗೆ ಕಣಕ್ಕಿಳಿಯುವುದಾಗಿ ಕಾರ್ಯಕರ್ತರಿಗೆ ಭರವಸೆ ಕೊಡಬೇಕು. ಇಲ್ಲದಿದ್ದರೆ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದರು. ಈ ವೇಳೆ ತನ್ವೀರ್‌ಸೇಠ್ ಮನೆಯಲ್ಲಿ ಇರದ ಕಾರಣ ಕುಟುಂಬದವರು ಪ್ರತಿಭಟನೆ ಕೈಬಿಡುವಂತೆ ಮನವೊಲಿಸಿದರು.

ಮಹಮ್ಮದ್ ಕಲೀಂ, ಅಕ್ರಂ ಇತರರು ಭಾಗವಹಿಸಿದ್ದರು.