ಬೀದಿ ಬದಿ ವ್ಯಾಪಾರಿಗಳು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ವಿಜಯಕುಮಾರ್, ಆರ್.ಮಣಿ, ನಾಗರಾಜ್, ರಾಜೇಶ್, ದಿನೇಶ್ ಇತರರಿದ್ದರು. 
ಜಿಲ್ಲೆ

ಸೂಕ್ತ ಜಾಗಕ್ಕೆ ಆಗ್ರಹಿಸಿ ಬೀದಿಬದಿ ವ್ಯಾಪಾರಿಗಳ ಪ್ರತಿಭಟನೆ

Shivamogga - Desk - Vinayakumar D B

ಶಿವಮೊಗ್ಗ: ಸರ್ಕಾರ 2014ರಲ್ಲಿ ರೂಪಿಸಿದ ಕಾನೂನಿನ ಪ್ರಕಾರ ಸೌಲಭ್ಯ ಒದಗಿಸಬೇಕು. ವ್ಯಾಪಾರಕ್ಕೆ ಸೂಕ್ತ ಜಾಗ, ವ್ಯಾಪಾರಿಗಳಿಗೆ ವಸತಿ ಸೌಲಭ್ಯ ಒದಗಿಸಬೇಕೆಂದು ಒತ್ತಾಯಿಸಿ ಬೀದಿ ಬದಿ ವ್ಯಾಪಾರಿಗಳು ಸೋಮವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ವ್ಯಾಪಾರ ಕುಂಟಿತವಾದ ಕಾರಣ ಜೀವನ ನಡೆಸುವುದೇ ಕಷ್ಟವಾಗಿದೆ. ನಗರದ 14 ಕಡೆಗಳಲ್ಲಿ ಕನ್ಸರ‌್ವೆನ್ಸಿಗಳಿವೆ. ಅಲ್ಲಿ ಮೂಲ ಸೌಲಭ್ಯ ಒದಗಿಸಿ ವ್ಯಾಪಾರ ವಹಿವಾಟು ನಡೆಸಲು ಅನುಕೂಲ ಕಲ್ಪಿಸಬೇಕು. ನಮ್ಮ ಮಕ್ಕಳ ಶಿಕ್ಷಣಕ್ಕೆ ಸರ್ಕಾರದಿಂದ ಆರ್ಥಿಕ ನೆರವು ನೀಡಬೇಕೆಂದು ಆಗ್ರಹಿಸಿದರು. ಸ್ವಂತ ವಸತಿಯಿಲ್ಲದ ಬೀದಿ ಬದಿ ವ್ಯಾಪಾರಿಗಳಿಗೆ ಆಶ್ರಯ ಯೋಜನೆಯಡಿ ಮನೆ ಮಂಜೂರು ಮಾಡಬೇಕು. ವ್ಯಾಪಾರಿಗಳಿಗೆ ಗುರುತಿನ ಚೀಟಿ ನೀಡಬೇಕು. ಬೀದಿ ಬದಿ ವ್ಯಾಪಾರಿಗಳ ಧಾರ್ಮಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗೆ ಅನುಕೂಲವಾಗುವಂತೆ ಸಮುದಾಯ ಭವನ ನಿರ್ಮಾಣ ಮಾಡಿಕೊಡಬೇಕೆಂದು ಒತ್ತಾಯಿಸಿದರು.
ಬೀದಿ ಬದಿ ವ್ಯಾಪಾರಿಗಳ ಸಂಘಟನೆಯ ಪ್ರಮುಖರಾದ ಆರ್. ಮಣಿ, ವಿಜಯಕುಮಾರ್, ದಿನೇಶ್, ರಾಜೇಶ್, ಉಮೇಶ್, ನಾಗರಾಜ್ ಇತರರಿದ್ದರು.