ಜಿಲ್ಲೆ

ಉಪ ನಗರ ಠಾಣೆ ಎದುರು ಶ್ರೀರಾಮ ಸೇನೆಯಿಂದ ಪ್ರತಿಭಟನೆ; ಲವ್ ಜಿಹಾದ್ ಪ್ರಕರಣ ಪ್ರಕರಣ ದಾಖಲಿಸಲು ಆಗ್ರಹ

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿವಾಹಿತ ಹಿಂದು ಮಹಿಳೆಯನ್ನು ಮುಸ್ಲಿಂ ವ್ಯಕ್ತಿ ಅಪಹರಿಸಿದ್ದಾನೆ. ಇದನ್ನು ಲವ್ ಜಿಹಾದ್ ಎಂದು ಪರಿಗಣಿಸಿ ಕೂಡಲೇ ಆರೋಪಿಯನ್ನು ಪತ್ತೆ ಮಾಡಲು ಒತ್ತಾಯಿಸಿ ಶ್ರೀರಾಮ ಸೇನೆ ಕಾರ್ಯಕರ್ತರು ಇಲ್ಲಿನ ಉಪನಗರ ಪೊಲೀಸ್ ಠಾಣೆ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ಜಿಲ್ಲಾಧ್ಯಕ್ಷ ಅಣ್ಣಪ್ಪ ದೀವಟಗಿ ನೇತೃತ್ವದಲ್ಲಿ ಕಾರ್ಯಕರ್ತರು ಮತ್ತು ಮಹಿಳೆಯ ಸಂಬAಽಕರು ಪ್ರತಿಭಟನೆ ನಡೆಸಿದರು.
ಮುನ್ನಾ ಎಂಬ ವ್ಯಕ್ತಿ ಇಲ್ಲಿನ ಆಂಜನೇಯನಗರದ ತಂಗೆಮ್ಮ ಎಂಬ ಮಹಿಳೆಯ ಮನೆ ಎದುರು ಬಾಡಿಗೆ ಮನೆ ಪಡೆದು 6ತಿಂಗಳಿನಿ0ದ ವಾಸವಿದ್ದ. ತಂಗೆಮ್ಮಳಿಗೂ ಮದುವೆಯಾಗಿದ್ದು, ಇನ್ನೂ ಗಂಡನ ಮನೆಗೆ ಕಳುಹಿಸಿಕೊಟ್ಟಿರಲಿಲ್ಲ. ಮುನ್ನಾಗೆ ಮದುವೆ ಆಗಿ 2 ಮಕ್ಕಳಿವೆ. ತಂಗೆಮ್ಮಳ ಪರಿಚಯ ಮಾಡಿಕೊಂಡ ಮುನ್ನಾ, ಸಲುಗೆ ಬೆಳೆಸಿ ಕರೆದುಕೊಂಡು ಹೋಗಿದ್ದಾನೆ. ಜು. 11ರಂದು ಉಪನಗರ ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗಿದ್ದರೂ ಇದುವರೆಗೂ ಪತ್ತೆ ಮಾಡಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.
ತಂಗೆಮ್ಮಳ ತಾಯಿಯ ಬಳಿ ಹಣಕಾಸಿನ ವ್ಯವಹಾರ ಮಾಡಿರುವ ಮುನ್ನಾ, ಹಣ ಪಡೆದು ಹೋಗಿದ್ದಾನೆ. ಆತನ ವಿರುದ್ಧ ಅಪಹರಣ ಪ್ರಕರಣ ದಾಖಲಿಸದೆ ನಾಪತ್ತೆ ದೂರು ದಾಖಲಿಸಲಾಗಿದೆ. ಪೊಲೀಸರು ಇದನ್ನು ಲವ್ ಜಿಹಾದ್ ಪ್ರಕರಣ ಎಂದು ಪರಿಗಣಿಸಬೇಕು ಎಂದು ಶ್ರೀರಾಮ ಸೇನೆ ಕಾರ್ಯಕರ್ತರು ಒತ್ತಾಯಿಸಿದರು.
ಮಂಜುನಾಥ ಕಾಟಕರ, ಹನುಮಂತ ಹಾಗೂ ಕಾಣೆಯಾದ ಮಹಿಳೆಯ ಸಂಬAಽಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.