ಜಿಲ್ಲೆ

ಸಾಲ ಮನ್ನಾ, ಬೆಳೆ ವಿಮೆ ಪಾವತಿಗೆ ಆಗ್ರಹ; ರೈತ ಸಂಘ ಹಸಿರು ಸೇನೆಯಿಂದ ಪ್ರತಿಭಟನೆ

ಮಂಜುನಾಥ ಅಂಗಡಿ

ಧಾರವಾಡ: ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿದೆ. ರಾಜ್ಯ ಸರ್ಕಾರ ಬರಪೀಡಿತ ಜಿಲ್ಲೆಗಳನ್ನು ಘೋಷಿಸಿದೆ. ರೈತರಿಗೆ ಸೂಕ್ತ ಬರ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಜಿಲ್ಲಾಽಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಲಾಯಿತು.
ಬರಗಾಲ ಇದ್ದರೂ ರಾಜ್ಯ ಸರ್ಕಾರ ರೈತರ ಬೆಳೆಸಾಲ ಮನ್ನಾ ಮÁಡಿಲ್ಲ. ಬೆಳೆವಿಮೆ ತುಂಬಿದರೂ ಪರಿಹಾರ ಜಮೆಯÁಗುತ್ತಿಲ್ಲ. ಕೂಡಲೇ ಸರ್ಕಾರಗಳು ರೈತರ ನೆರವಿಗೆ ಬರಬೇಕು. ಬೆಳೆ ಪರಿಹಾರ ಹಾಗೂ ಬರ ಪರಿಹಾರ ನೀಡಬೇಕು. ಪ್ರತಿ ಹೆಕ್ಟೇರ್ ೨೫ ಸಾವಿರ ರೂಪಾಯಿ ಪರಿಹಾರ ನೀಡಬೇಕು. ಕಳಸಾ, ಬಂಡೂರಿ ಹಾಗೂ ಮಹದಾಯಿ ಸಮಸ್ಯೆಯನ್ನು ಶೀಘ್ರ ಬಗೆಹರಿಸಬೇಕು ಎಂದು ರೈತರು ಜಿಲ್ಲಾಽಕಾರಿ ಮುಖಾಂತರ ಮುಖ್ಯಮಂತ್ರಿಗಎ ಮನವಿ ರವಾನಿಸಿದರು.
ಮಲ್ಲಿಕಾರ್ಜುನ ಕುನ್ನೂರ, ಚಂದ್ರಣ್ಣ ಕಟಗಿ, ಬಸವರಾಜ ಹರವಿ, ಫಕ್ಕೀರಪ್ಪ ಪೂಜಾರ, ಪರಮೇಶ ನಾಯ್ಕರ್, ವೈ.ಎನ್. ಪಾಟೀಲ, ಶಂಕ್ರಮ್ಮ ಸುತಾರ, ವಿ.ಎಸ್. ಕಂಟೆಪ್ಪಗೌಡರ, ಅನ್ನಪೂರ್ಣಾ ಪಾಟೀಲ, ಶಂಕರಗೌಡ ದೊಡ್ಡಮನಿ, ಗುರುಪಾದ ಬಂಕದ, ಬಸವರಾಜ ಬೂದಿಹಾಳ, ಶಿವು ಗೌಡಪ್ಪನವರ, ಬಸವರಾಜ ಸಂಕಣ್ಣವರ, ಎಸ್.ಎಸ್. ಹಿರೇಮಠ, ಇತರರಿದ್ದರು.