ಜಿಲ್ಲೆ

ಕಾನೂನು ಉಲ್ಲಂಸಿದವರ ವಿರುದ್ಧ ಕ್ರಮಕ್ಕೆ ಪಟ್ಟು, ಆನೇಕಲ್‌ನಲ್ಲಿ ಪ್ರಜಾ ವಿಮೋಚನಾ ಚಳವಳಿಯಿಂದ ಪ್ರತಿಭಟನೆ

Bengaluru Rural

ಆನೇಕಲ್: ಬೆಂಗಳೂರಿನ ಡಿಜೆ ಹಳ್ಳಿ ಹಾಗೂ ಕೆಜಿಹಳ್ಳಿ ಗಲಭೆಯಲ್ಲಿ ಪೊಲೀಸರು ಹಾಗೂ ಮಾಧ್ಯಮದವರ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಪ್ರಜಾ ವಿಮೋಚನಾ ಚಳವಳಿ ಸಂಘಟನೆಯಿಂದ ಪಟ್ಟಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಕಾನೂನನ್ನು ಉಲ್ಲಂಸುವುದು ಸರಿಯಲ್ಲ. ಆದರೆ ಗಲಭೆಕೋರರು ಪೂರ್ವನಿಯೋಜಿತವಾಗಿ ಸಜ್ಜುಗೊಂಡು ಬಂದು ಪೊಲೀಸರು ಹಾಗೂ ಪತ್ರಕರ್ತರ ಮೇಲೆ ಹಲ್ಲೆ ಮಾಡಿರುವುದು ಖಂಡನೀಯ ಎಂದು ಸಂಘಟನೆ ಅಧ್ಯಕ್ಷ ಆನೇಕಲ್ ಕೃಷ್ಣಪ್ಪ ಹೇಳಿದರು.

ಯಾರು ತಪ್ಪು ಮಾಡುತ್ತಾರೋ ಅಂತಹ ವ್ಯಕ್ತಿಗಳ ಆಸ್ತಿಗಳನ್ನು ಮುಟ್ಟುಗೋಲು ಹಾಕುವಂತಹ ಉತ್ತರಪ್ರದೇಶ ಮಾದರಿಯ ಕಾನೂನನ್ನು ಕರ್ನಾಟಕದಲ್ಲಿಯೂ ಜಾರಿಗೆ ತಂದರೆ ಇಂಥ ಘಟನೆ ಮರುಕಳಿಸುವುದಿಲ್ಲ. ರಾಜ್ಯ ಸರ್ಕಾರ ಈ ಬಗ್ಗೆ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೇಳಿದರು.

ಸಂಘಟನೆಯ ಬೆಂಗಳೂರು ವಿಭಾಗೀಯ ಅಧ್ಯಕ್ಷ ಯಡವನಹಳ್ಳಿ ಕೃಷ್ಣಪ್ಪ ಮಾತನಾಡಿ, ಸಾರ್ವಜನಿಕ ಆಸ್ತಿ ಹಾಳುಮಾಡಿರುವ ಪುಂಡರ ಆಸ್ತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡು ನಷ್ಟವಾಗಿರುವ ಸಾರ್ವಜನಿಕರಿಗೆ ಭರಿಸಿಕೊಡಬೇಕು. ಶಾಸಕರ ಮನೆಗೆ ಹಾನಿ ಮಾಡಿರುವ ಕಿಡಿಗೇಡಿಗಳನ್ನು ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.

ಶಾಂತಿ, ಸೌಹಾರ್ದತೆಗೆ ಕರ್ನಾಟಕ ಮಾದರಿಯಾಗಬೇಕದರೆ ಕೋಮು ಗಲಭೆಗೆ ಆಸ್ಪದ ನೀಡದಂತೆ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಎಂದು ಹೇಳಿದರು.

ಕಠಿಣಕ್ರಮಕ್ಕೆ ಆಗ್ರಹಿಸಿ ವಿಶೇಷ ತಾಸಿಲ್ದಾರ್ ಹನುಮಂತಪ್ಪ ಅವರಿಗೆ ಸಲ್ಲಿಸಲಾಯಿತು. ಸಂಘಟನೆ ಜಿಲ್ಲಾ ಉಪಾಧ್ಯಕ್ಷ ಅರೆಹಳ್ಳಿ ಅಶ್ವತ್ಥ, ತಾಲೂಕು ಉಪಾಧ್ಯಕ್ಷ ರಾಗಿಹಳ್ಳಿ ಮುನಿರಾಜು, ತಾಲೂಕು ಯುವ ಘಟಕದ ಹಳೆಹಳ್ಳಿ ರವಿ, ಟೌನ್ ಅಧ್ಯಕ್ಷ ಆರ್ ವೆಂಕಟೇಶ್, ಉಪಾಧ್ಯಕ್ಷ ಎ.ಲವ, ಸಂಘಟನೆ ಮುಖಂಡರಾದ ಬನ್ನೇರುಘಟ್ಟ ಮಂಜು, ಸಬ್‌ಮಂಗಲ ರವಿ, ಆನೇಕಲ್ ಗಣೇಶ್, ಸೋಲೂರು ಕುಮಾರ್, ಅತ್ತಿಬೆಲೆ ಮಂಜು, ಆನೇಕಲ್ ಚಿದಾನಂದ ಮತ್ತಿತರರು ಹಾಜರಿದ್ದರು.