ಪಂಚಮಸಾಲಿ ಸಮುದಾಯ ನಿರಂತರವಾಗಿ ಶಾಂತಿಯುತ ಹೋರಾಟ ಮಾಡುತ್ತ ಬಂದಿದೆ. ಆದರೆ ಸಿದ್ದರಾಮಯ್ಯ ಸರ್ಕಾರ ಬೆಳಗಾವಿಯಲ್ಲಿ ಹೋರಾಟ ಮಾಡುತ್ತಿರುವವರ ಮೇಲೆ ದೌರ್ಜನ್ಯ ಎಸಗಿ ಪ್ರಜಾತಂತ್ರ ವಿರೋಧಿಯಾಗಿ ವರ್ತಿಸಿದ್ದು ಖಂಡನೀಯ' ಎಂದು ಹೇಳಿದರು.
ಬಬಲೇಶ್ವರ ತಾಲ್ಲೂಕಿನ ಕಾರಜೋಳ ಕ್ರಾಸ್ ವಿಜಯಪುರ ಹುಬ್ಬಳ್ಳಿ ರಾಷ್ಟ್ರೀಯ ಗ ಹೆದ್ದಾರಿ ತಡೆ ನಡೆಸಿ ಪಂಚಮಸಾಲಿ ಸಮುದಾಯದವರು ಗುರುವಾರ ನಡೆಸಿದ ಪ್ರತಿಭಟನೆಯಲ್ಲಿ ಕೋಲಾರ್ ತಾಲೂಕಿನ ತಹಶೀಲ್ದಾರ್ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಮಾತನಾಡಿದರು.ಬಬಲೇಶ್ವರದ ಬ್ರಹ್ಮಮಠದ ಪೀಠಾಽಪತಿ ಹಾಗೂ ಪಂಚಮಸಾಲಿ _ಆಲಗೂರು ಪೀಠದ ಮೂರನೇ ಜಗದ್ಗುರು ಡಾ. ಮಹಾದೇವ ಶಿವಾಚಾರ್ಯರು ಕಾಂಗ್ರೆಸ್ ಸರಕಾರ ನಮ್ಮ ಹೋರಾಟವನ್ನು ಹತ್ತಿಕ್ಕಲು ಎಷ್ಟೇ ಪ್ರಯತ್ನ ಪಟ್ಟರೂ ಮೀಸಲಾತಿ ಸಿಗುವವರೆಗೂ ಹೋರಾಟ ನಿಲ್ಲಿಸುವ ಪ್ರಶ್ನೆಯೇ ಇಲ್ಲ.
ಪೊಲೀಸರ ಲಾಠಿಚಾರ್ಜ್‌ನಿಂದ ಧೃತಿಗೆಡುವ ಪ್ರಶ್ನೆಯೇ ಇಲ್ಲ. ನಮ್ಮ ಹೋರಾಟ ಅಸಂವಿಧಾನಿಕ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ನಮ್ಮದು ಸಂವಿಧಾನ ಪರವಾದ ಹೋರಾಟ. ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಶಾಂತಿಯುತವಾಗಿ ಹೋರಾಟ ಮಾಡುತ್ತಿದ್ದವರ ಮೇಲೆ ಪೊಲೀಸರಿಂದ ಲಾಠಿ ಪ್ರಹಾರ ಮಾಡಿಸುವುದು ಸಂವಿಧಾನಾತ್ಮಕ ಪ್ರಕ್ರಿಯೇ ತಾನೇ ಎಂಬುದನ್ನು ಸಿಎಂ ಸಿದ್ದರಾಮಯ್ಯ ಮೊದಲು ಸ್ಪಷ್ಟಪಡಿಸಲಿ ಎಂದರು.
ಬಂಧಿಸಿದವರನ್ನು ಕೂಡಲೇ ಬಿಡುಗಡೆ ಮಾಡಬೇಕು. ಮುಖ್ಯಮಂತ್ರಿ ಪಂಚಮಸಾಲಿ ಸಮಾಜಕ್ಕೆ ಪೀಠದ ಶ್ರೀಗಳ ಕ್ಷಮೆ ಕೇಳಬೇಕು' ಎಂದರು. ಬಿಜೆಪಿ ಮುಖಂಡ ವಿಜುಗೌಡ ಎಸ್ ಪಾಟೀಲ್ ಮಾತನಾಡಿ, ಮಾತನಾಡಿ, ನ್ಯಾಯಯುತವಾಗಿ ಮೀಸಲಾತಿ ಪಡೆಯಲು ಶಾಂತಿಯುತವಾಗಿ ಮಾಡುತ್ತಿದ್ದ ಹೋರಾಟವನ್ನು ಪೊಲೀಸ್ ಶಕ್ತಿ ಪ್ರಯೋಗಿಸಿ ಹತ್ತಿಕ್ಕುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರಕಾರ ಆಧುನಿಕ ಬ್ರಿಟಿಷರಂತೆ ವರ್ತಿಸಿರುವುದು ಖಂಡನೀಯವಾಗಿದೆ. ಪಂಚಮಸಾಲಿ ಹೋರಾಟಗಾರರ ಮೇಲೆ ದೌರ್ಜನ್ಯ ಎಸಗಿ ಸರಕಾರ ತನ್ನ ಪ್ರಜಾಪ್ರಭುತ್ವ ವಿರೋಧಿ ಧೋರಣೆ ಪ್ರದರ್ಶಿಸಿದೆ. ಮಾನವ ಹಕ್ಕುಗಳ ಉಲ್ಲಂಘನೆಗೈದು ಪ್ರಜಾಪ್ರಭುತ್ವ ವಿರೋಧಿ ಹಿಟ್ಲರ್ ಆಡಳಿತ ಹೇರುತ್ತಿದೆ.
ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಹದಗೆಟ್ಟಿರುವುದರಿಂದ ಕೂಡಲೇ ಜನವಿರೋಧಿ üರಾಜ್ಯ ಸರಕಾರವನ್ನು ವಜಾಗೊಳಿಸಿ ರಾಜ್ಯದಲ್ಲಿ ರಾಷ್ಟçಪತಿ ಆಡಳಿತ ಹೇರಬೇಕು ಎಂದು ಒತ್ತಾಯಿಸಿದರು. ವಿಜಯಪುರ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಸುರೇಶ್ ಬಿರಾದಾರ್ ಪಂಚಮಸಾಲಿ ಮುಖಂಡ ಬಸವರಾಜ್ ಸಿದ್ದಾಪುರ ಮಾತನಾಡಿದರು.
ಸಮಾಜದ ಮುಖಂಡರಾದ ಸಂಗನಗೌಡ ಪಾಟೀಲ್ ಸಂತೋಷ್ ಬಿರಾದರ್ ಸಂಗು ವಿಜಯಪುರ ಸದಾನಂದ ಇಂಡಿ. ಈರಣ್ಣ ಶಿರಮ ಗೊಂಡ ದುಂಡಪ್ಪ ಅವಟಿ ಗಂಗಪ್ಪ ಭಗವತಿ ಸಿದ್ದನಗೌಡ ಬಿರಾದಾರ್ ಹನುಮಂತ ದಾಶ್ಯಳ ಬಸವರಾಜ್ ಕೆಂಗನಾಳ ಕಿರಣ್ ಬಿರಾದಾರ್ ಗಾಣಿಗ ಸಮಾಜದ ಮುಖಂಡರಾದ ನಿಂಗಪ್ಪ ಬೆಳ್ಳುಬ್ಬಿ ಚೆನ್ನಪ್ಪ ಮಂದೋಲಿ ಪರಪ್ಪ ಅವಟಿ