ಹಿರೇಕೆರೂರ: ತಮಿಳುನಾಡಿಗೆ ಕಾವೇರಿ ಹರಿಸುವುದನ್ನು ವಿರೋಧಿಸಿ, ಕೇಂದ್ರ ಸರ್ಕಾರ ಮಧ್ಯಪ್ರವೇಶಿಸುವಂತೆ ಆಗ್ರಹಿಸಿ ತಾಲೂಕು ಕರವೇ (ಪ್ರವೀಣ ಶೆಟ್ಟಿ ಬಣ) ವತಿಯಿಂದ ಪಟ್ಟಣದ ಅಂಚೆ ಕಚೇರಿಗೆ ಶನಿವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಕಚೇರಿಯ ಅಧಿಕಾರಿ ಎಸ್.ಎಂ. ಕೋಟಿ ಅವರಿಗೆ ಮನವಿ ಸಲ್ಲಿಸಲಾಯಿತು. ಕರವೇ ತಾಲೂಕು ಅಧ್ಯಕ್ಷ ಭರಮಪ್ಪ ಡಮ್ಮಳ್ಳಿ, ಕಾರ್ಮಿಕ ಘಟಕದ ಅಧ್ಯಕ್ಷ ಅಶೋಕ ಬಡಿಗೇರ, ದಾದಾಪೀರ ಮಲ್ಲಾಡದ, ಅಜೀಜ್ ಮನ್ನಳ್ಳಿ, ತೌಫಿಕ್ ಚಿಕ್ಕೋಣತಿ, ಈರಪ್ಪ ಬಣಕಾರ, ಮುಜಾಮಿಲ್ ಮಕಾಂದಾರ, ನಸರುಲ್ಲಾ ಚಿಕ್ಕೋಣತಿ, ರವಿ ಕುರುಬರ, ಸೋಮಶೇಖರ ಯಲ್ಲಾಪುರ, ಜಮೀರ್ ಚಿಕ್ಕೋಣತಿ, ನೂರುಲ್ಲಾ ಸಿಕ್ಕಲಗಾರ, ನಟರಾಜ ಸಜ್ಜನರ, ಕಾಶಿನಾಥ ಭಜಂತ್ರಿ, ದಾದಾಪೀರ ಹರಿಹರ, ಯಾಸೀನ್ ಕಲೆಗಾರ, ರಮೇಶ ಓಬಳೇರ, ಇಲಿಯಾಸ್ ದ್ಯಾಮನಕೂಪ್ಪ, ರಾಜು ಸೆಣಬಿನ, ಶಂಭು ಕುಬಸದ, ಶಶಿ ಚಿನ್ನಿಕಟ್ಟಿ, ಆಸೀಫ ಮುಲ್ಲಾ, ಮಾರುತಿ ಕೂಟಿಹಾಳ ಇದ್ದರು.