23ಎಂಡಿಆರ್1 ಮದ್ದೂರು ತಾಲೂಕಿನ ಕುಂಟನಹಳ್ಳಿ ಗ್ರಾಮಕ್ಕೆ ಮೂಲ ಸೌಕರ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಪ್ರತಿಭಟನೆ ಮಾಡಿದರು. ರಾಮ್ ಕುಮಾರ್, ಅಪ್ಪು, ವಿಷ್ಣು, ನಂಜುಂಡಿ, ಪುಟ್ಟರಾಜು, ಚನ್ನಮ್ಮ, ಸುಜಿಯಮ್ಮ, ಸವಿತಾ, ಪದ್ಮಾ, ಸಾಕಮ್ಮ, ರವಿಕುಮಾರ್ ಇದ್ದರು. 
ಜಿಲ್ಲೆ

ಕುಂಟುನಹಳ್ಳಿ ಗ್ರಾಮಸ್ಥರಿಂದ ಪ್ರತಿಭಟನೆ

ರವಿಕುಮಾರ್ ಪಿ. ಕೆ

ಮದ್ದೂರು: ತಾಲೂಕಿನ ಕುಂಟನಹಳ್ಳಿ ಗ್ರಾಮಕ್ಕೆ ಮೂಲಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಮಂಗಳವಾರ ಪ್ರತಿಭಟನೆ ನಡೆಸಿದರು.
ಗ್ರಾಮಕ್ಕೆ ಮೂಲ ಸೌಕರ್ಯ ಕಲ್ಪಿಸದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದರು.

ಗ್ರಾಮದ ಮುಖಂಡ ರಾಮಕುಮಾರ್ ಮಾತನಾಡಿ, ಹಲವಾರು ವರ್ಷಗಳಿಂದ ಗ್ರಾಮದಲ್ಲಿರುವ ನಾಲ್ಕು ಬೀದಿಗಳಿಗೆ ಡಾಂಬರೀಕರಣ ಮಾಡದ ಕಾರಣ ಸಂಚಾರ ದುಸ್ತರವಾಗಿದೆ. ಮಳೆ ಬಂದಾಗ ರಸ್ತೆ ಕೆಸರುಗದ್ದೆಯಂತಾಗಿ ವಿದ್ಯಾರ್ಥಿಗಳು, ಮಹಿಳೆಯರು, ವಾಹನ ಸವಾರರು ರಸ್ತೆಯಲ್ಲಿ ಸಂಚಾರ ಮಾಡುವುದು ಕಷ್ಟಕರವಾಗಿದೆ ಎಂದು ಆರೋಪಿಸಿದರು. ಗ್ರಾಮದಲ್ಲಿ ಸಮರ್ಪಕವಾದ ಚರಂಡಿ ವ್ಯವಸ್ಥೆ ಇಲ್ಲದ ಪರಿಣಾಮ ನೀರು ಸರಾಗವಾಗಿ ಮುಂದಕ್ಕೆ ಹರಿಯದೆ ನಿಂತಲ್ಲೇ ನಿಂತುಕೊಂಡು ಸೊಳ್ಳೆಗಳು ಉತ್ಪತ್ತಿಯಾಗುತ್ತಿರುವರಿಂದ ರೋಗ, ರುಜಿನಗಳು ಹರಡುವ ಆತಂಕ ಮನೆ ಮಾಡಿದೆ ಎಂದರು.

ಗ್ರಾಮದಲ್ಲಿರುವ ಬೀದಿ ದೀಪಗಳನ್ನು ಸರಿಪಡಿಸದ ಕಾರಣ ಗ್ರಾಮಸ್ಥರು ರಾತ್ರಿ ವೇಳೆಯಲ್ಲಿ ಸಂಚಾರ ಮಾಡಲು ತುಂಬ ತೊಂದರೆಯಾಗುತ್ತಿದೆ. ಇಷ್ಟೆಲ್ಲ ಸಮಸ್ಯೆಗಳ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಮುಂದಾದರು, ಈ ಸಂಬಂಧ ಅಗತ್ಯ ಕ್ರಮ ಕೈಗೊಂಡು ಸಮಸ್ಯೆ ಸರಿಪಡಿಸದೆ ಹೋದರೆ ಮುಂದಿನ ದಿನಗಳಲ್ಲಿ ತಾಲೂಕು ಪಂಚಾಯಿತಿಗೆ ಮುತ್ತಿಗೆ ಹಾಕಿ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ರಾಮ್ ಕುಮಾರ್, ಅಪ್ಪು, ವಿಷ್ಣು, ನಂಜುಂಡಿ, ಪುಟ್ಟರಾಜು, ಚನ್ನಮ್ಮ, ಸುಜಿಯಮ್ಮ, ಸವಿತಾ, ಪದ್ಮಾ, ಸಾಕಮ್ಮ, ರವಿಕುಮಾರ್ ಇದ್ದರು.