ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ಅವರ ಬಂಧನ ಖಂಡಿಸಿ ಜೇವರ್ಗಿಯಲ್ಲಿ ಕರವೇ ಕಾರ್ಯಕರ್ತರಿಂದ ಸೋಮವಾರ ಅರೆಬೆತ್ತಲೆ ಪ್ರತಿಭಟನೆ ನಡೆಸಲಾಯಿತು. ಯಲ್ಲಪ್ಪ ಬಂಕಲಗಿ, ಕಾಶೀನಾಥ ಸಾಹು ಮಂದೇವಾಲ, ಸಿದ್ದು ದೇಸಣಗಿ, ಮಲ್ಲಿಕಾರ್ಜುನ ಬಿರಾದಾರ ಇತರರಿದ್ದರು.  
ಜಿಲ್ಲೆ

ಕರವೇ ಕಾರ್ಯಕರ್ತರಿಂದ ಅರೆಬೆತ್ತಲೆ ಮೆರವಣಿಗೆ

ರಾಜು ಯಮಕನಮರಡಿ

ಜೇವರ್ಗಿ: ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ಅವರ ಬಂಧನ ಖಂಡಿಸಿ ಪಟ್ಟಣದಲ್ಲಿ ಕರವೇ ಕಾರ್ಯಕರ್ತರು ಸೋಮವಾರ ಅರೆಬೆತ್ತಲೆ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಎರಡು ದಶಕಗಳಿಂದ ಕರ್ನಾಟಕದ ನೆಲ, ಜಲ, ಭಾಷೆ ರಕ್ಷಣೆಗಾಗಿ ಹಾಗೂ ನಾಡಿನ ಮಕ್ಕಳ ಭವಿಷ್ಯಕ್ಕಾಗಿ ನಾರಾಯಣಗೌಡರು ಹೋರಾಟ ನಡೆಸುತ್ತಿದ್ದಾರೆ. ಕರವೇಯನ್ನು ಕಟ್ಟುವ ಮೂಲಕ ಪ್ರತಿ ಹಳ್ಳಿಯಲ್ಲೂ ಕನ್ನಡ ಕಟ್ಟುವ ದೀಕ್ಷೆ ತೊಟ್ಟಿದ್ದಾರೆ. ಇಂತಹ ಕನ್ನಡ ಪ್ರೇಮಿಯನ್ನು ರಾಜ್ಯ ಸರ್ಕಾರ ಬಂಧಿಸಿರುವುದು ಸರಿಯಲ್ಲ. ಕೂಡಲೇ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ನಿರಂತರ ಹೋರಾಟ ನಡೆಸಬೇಕಾಗುತ್ತದೆ ಎಂದು ಕಾರ್ಯಕರ್ತರು ಎಚ್ಚರಿಕೆ ನೀಡಿದರು.

ತಾಲೂಕು ಅಧ್ಯಕ್ಷ ಯಲ್ಲಪ್ಪ ಬಂಕಲಗಿ, ಪ್ರಮುಖರಾದ ಕಾಶೀನಾಥ ಸಾಹು ಮಂದೇವಾಲ, ಸಿದ್ದು ದೇಸಣಗಿ, ಮಲ್ಲಿಕಾರ್ಜುನ ಬಿರಾದಾರ, ಪ್ರಭಾಕರ ಖಂಡಗಾರ, ಪರಶುರಾಮ ನೇದಲಗಿ, ವಿಶ್ವನಾಥ ನಾಟಿಕಾರ, ರಫೀಕ್ ಜೇರಟಗಿ, ಸಂತೋಷ ಜೈನಾಪುರ, ಚಿದಾನಂದ ಗೋಡಣೆ, ನಾಗೇಶ ಹಣಮಂತಗೋಳ, ಕಲ್ಲಪ್ಪ ಪೂಜಾರಿ, ಬಸವರಾಜ ನಾಯ್ಕೋಡಿ, ಸಂಗಮೇಶ ಗಸ್ತಗಾರ, ಗುರು ಜೈನಾಪುರ, ನಿಂಗಣ್ಣ ದೇಸಣಗಿ, ಗುಂಡಪ್ಪ ನಾಟಿಕಾರ ಇತರರಿದ್ದರು.

ಬಸವೇಶ್ವರ ವೃತ್ತದಿಂದ ಮಿನಿ ವಿಧಾನಸೌಧದವರೆಗೂ ಅರೆ ಬೆತ್ತಲೆ ಮೆರವಣಿಗೆ ನಡೆಸಲಾಯಿತು. ದಾರಿಯುದ್ದಕ್ಕೂ ಕಾರ್ಯಕರ್ತರು ನಾರಾಯಣಗೌಡ ಪರ ಹಾಗೂ ಸರ್ಕಾರ ವಿರುದ್ಧ ಘೋಷಣೆ ಕೂಗಿದರು. ತಹಸೀಲ್ದಾರ್ ಮಲ್ಲಣ್ಣ ಯಲಗೋಡ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.