ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ಮಂಗಳವಾರ ತಾಪಂ ಇಒ ಡಾ.ಗೋವಿಂದ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು. ಸಂಘದ ತಾಲೂಕು ಅಧ್ಯಕ್ಷ ಮಲ್ಲಪ್ಪ ಸೊನ್ನದ, ಪಿಡಿಒಗಳಾದ ಹಣಮಂತಪ್ಪ ಕಡಕೋಳ, ಜಗದೇವಿ ಕಡಕೋಳ, ರಾಜಶೇಖರ ಬುಳ್ಳಾ, ಮಾಧವರಾವ ದೇಶಪಾಂಡೆ, ರಾಜಕುಮಾರ ಬುಳ್ಳಾ, ಪೂರ್ಣಿಮಾ ಪಂಚಾಳ, ರೇಖಾ ಚನ್ನಮಲ್ಲ ಇತರರಿದ್ದರು. 
ಜಿಲ್ಲೆ

ನ್ಯಾಯಯುತ ಬೇಡಿಕೆ ಶೀಘ್ರ ಈಡೇರಿಸಿ

ಹುಮನಾಬಾದ್: ರಾಜ್ಯದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ನಾಯ್ಯಯುತ ಬೇಡಿಕೆಗಳನ್ನು ಶೀಘ್ರವೇ ಈಡೇರಿಸಬೇಕೆಂದು ಕರ್ನಾಟಕ ರಾಜ್ಯ ಪಂಚಾಯಿತಿ ಅಭಿವೃಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಫದ ತಾಲೂಕು ಘಟಕ ಸರ್ಕಾರಕ್ಕೆ ಒತ್ತಾಯಿಸಿದೆ.

ಮಂಗಳವಾರ ಸಂಘದ ಪದಾಧಿಕಾರಿಗಳು ಹಾಗೂ ಪಿಡಿಒಗಳ ನಿಯೋಗ ಮುಖ್ಯಮಂತ್ರಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜï ಇಲಾಖೆ ಸಚಿವರಿಗೆ ಬರೆದ ಮನವಿ ಪತ್ರವನ್ನು ತಾಪಂ ಇಒ ಡಾ.ಗೋವಿಂದ ಅವರಿಗೆ ಸಲ್ಲಿಸಿ, ಪಿಡಿಒ ಅವರು ಹಗಲಿರುಳು ಶ್ರಮವಹಿಸಿ ಸರ್ಕಾರದ ಯೋಜನೆಗಳನ್ನು ಗ್ರಾಮದ ಪ್ರತಿ ಮನೆಗೂ ತಲುಪಿಸುತ್ತಿದ್ದೇವೆ. ಇದರಿಂದ ಗ್ರಾಮೀಣ ಜನರ ಜೀವನಮಟ್ಟ, ಬದಲಾವಣೆಗೆ ಸಾಕ್ಷಿ ಆಗಿದ್ದಾರೆ. ಇಲಾಖೆಗೆ ೨೦೧೦ ರಿಂದ ಇಲ್ಲಿಯವರೆಗೆ ಹಲವಾರು ರಾಷ್ಟ್ರ ಮಟ್ಟದ ಪ್ರಶಸ್ತಿ ಮತು ಗೌರವಗಳು ಸಂದಿವೆ. ಆದರೆ ಪಿಡಿಒಗಳ ವೈಯಕ್ತಿಕ ಮತ್ತು ಸಾಮಾಜಿಕ ಬದುಕು ಕತ್ತಲೆಯ ರೂಪವಾಗಿದೆ. ಇದಕ್ಕೆ ನಮ್ಮ ಇಲಾಖೆಯ ಹಿರಿಯ ಅಧಿಕಾರಿಗಳು ಕಾರಣರಾಗಿದ್ದಾರೆ ಎಂದು ಆರೋಪಿಸಿದರು.

ಪಿಡಿಒ ಹುದ್ದೆ ಸೃಷ್ಟಿಯಾಗಿ ೧೩ ವರ್ಷ ಕಳೆದರೂ ಕಾನೂನುಬದ್ಧವಾದ ಜೇಷ್ಠತಾ ಪಟ್ಟಿ ಅಂತಿಮಗೊಳಿಸಿಲ್ಲ. ತಾಪಂಗಳಲ್ಲಿ ಖಾಲಿ ಇರುವ ಸಹಾಯಕ ನಿರ್ದೇಶಕ (ಪಂ.ರಾ) ಹುದ್ದೆಗಳಿಗೆ ಬಡ್ತಿ ನೀಡಲು ವಿಳಂಬ ಧೋರಣೆ ಅನುಸರಿಸುತ್ತಿರುವುದು. ಸಾಮಾನ್ಯ ವರ್ಗಾವಣೆ ಅವಧಿ ಮುಗಿದರೂ ಸಹ ನಿಯಮ ಮೀರಿ ನಿರಂತರ ವರ್ಗಾವಣೆ ಮಾಡುತ್ತಿರುವುದು ಹಾಗೂ ಹಲವಾರು ಭಾದಿತ ನೌಕರರಿಗೆ ಸ್ಥಳ ನಿಯುಕ್ತಿ ಮಾಡದೇ, ವೇತನ ಸಹ ಮಾಡದೇ ಇರುವುದು ಸೇರಿ ವಿವಿಧ ಬೇಡಿಕೆ ಈಡೇರಿಸದಿದ್ದಲ್ಲಿ ರಾಜ್ಯಾದ್ಯಂತ ಮೂಲಸೌಲಭ್ಯ ಹೊರತುಪಡಿಸಿ ಉಳಿದ ಕೆಲಸಗಳಿಗೆ ಇಲಾಖೆಯೊಂದಿಗೆ ಅಸಹಕಾರ ನೀಡಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.

ಸಂಘದ ತಾಲೂಕು ಅಧ್ಯಕ್ಷ ಮಲ್ಲಪ್ಪ ಸೊನ್ನದ, ಪಿಡಿಒಗಳಾದ ಹಣಮಂತಪ್ಪ ಕಡಕೋಳ, ಜಗದೇವಿ ಕಡಕೋಳ, ರಾಜಶೇಖರ ಬುಳ್ಳಾ, ಮಾಧವರಾವ ದೇಶಪಾಂಡೆ, ರಾಜಕುಮಾರ ಬುಳ್ಳಾ, ಪೂರ್ಣಿಮಾ ಪಂಚಾಳ, ರೇಖಾ ಚನ್ನಮಲ್ಲ, ಗೀತಾ ಸೀತಾಳಗೇರಾ, ಶಿವರಾಜ ಮಂಗಲಗಿ, ಮಲ್ಲಿಕಾರ್ಜುನ ಸಾಗರ, ರಘುನಾಥ ದುಬಲಗುಂಡಿ ಇತರರಿದ್ದರು.