ಕುರುಗೋಡಿನಲ್ಲಿ ತಹಸೀಲ್ದಾರ್ ನರಸಪ್ಪಗೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಮನವಿ ಸಲ್ಲಿಸಲಾಯಿತು. ಸಂಘದ ಅಧ್ಯಕ್ಷ ಮಾಧವ ರೆಡ್ಡಿ, ಪ್ರಮುಖರಾದ ಎಂ ಉಮಾಪತಿ ಗೌಡ, ಬಸವರಾಜರೆಡ್ಡಿ, ಜಿ.ಗಾದಿಲಿಂಗಪ್ಪ, ಕಲ್ಲುಕಂಬ ಗೊಲ್ಲರ ಪಂಪಣ್ಣ, ಗುಂಡರೆಡ್ಡಿ, ಆರ್.ನಾಗೇಶ್ವರ ರಾವ್, ವೀರೇಶಪ್ಪ, ಆರ್ ಪಂಪಾಪತಿ, ಬಿ ಸುರೇಂದ್ರ, ಗೋವರ್ಧನರೆಡ್ಡಿ, ಆದಿಗೌಡ ರಾಮಚಂದ್ರಪ್ಪ, ಎ.ಬಸವರಾಜ, ಹನುಮಂತರೆಡ್ಡಿ ಇತರರಿದ್ದರು. 
ಜಿಲ್ಲೆ

ಕೃಷಿ ಮಾರುಕಟ್ಟೆ ಒದಗಿಸಿ

ಶ್ರೀನಾಥ

ಕುರುಗೋಡು: ರೈತರಿಗೆ ಸಕಾಲಕ್ಕೆ ಬಿತ್ತನೆ ಬೀಜ, ರಸಗೊಬ್ಬರ ಪೂರೈಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪಟ್ಟಣದ ಎಪಿಎಂಸಿ ಮಾರುಕಟ್ಟೆಯಿಂದ ತಹಸಿಲ್ ಕಚೇರಿವರೆಗೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಯಿತು. ಬಳಿಕ ತಹಸೀಲ್ದಾರ್ ನರಸಪ್ಪಗೆ ಮನವಿ ಸಲ್ಲಿಸಲಾಯಿತು.

ರೈತ ಸಂಘದ ಅಧ್ಯಕ್ಷ ಮಾಧವ ರೆಡ್ಡಿ ಮಾತನಾಡಿ, ಕಂಪ್ಲಿ ಹಾಗೂ ಕುರುಗೋಡು ತಾಲೂಕುಗಳಲ್ಲಿ ಶೇ.83 ರೈತರು ತುಂಗಭದ್ರಾ ಜಲಾಶಯ ಹಾಗೂ ಬೋರ್‌ವೆಲ್ ಆಶ್ರಯದಲ್ಲಿ ವಿವಿಧ ಬೆಳೆ ಬೆಳೆಯುತ್ತಿದ್ದರೂ, ಈವರೆಗೂ ಸರಿಯಾದ ಕೃಷಿ ಮಾರುಕಟ್ಟೆ ಇಲ್ಲದೆ ಪರದಾಡುವಂತಾಗಿದೆ ಎಂದು ದೂರಿದರು.

ಗ್ರಾಪಂ ವ್ಯಾಪ್ತಿಯಲ್ಲಿ ದಾಸ್ತಾನು ಮಳಿಗೆ ತೆರೆಯಬೇಕು. ರಾಬಕೊವಿ ಆಡಳಿತ ಮಂಡಳಿ ವ್ಯವಸ್ಥೆಯನ್ನು ಸುಧಾರಿಸಬೇಕು. ಜಿಂದಾಲ್ ಕಾರ್ಖಾನೆಯಿಂದ ಬಿಡುತ್ತಿರುವ ವಿಷಪೂರಿತ ತ್ಯಾಜ್ಯ ನೀರು ದರೋಜಿ ಕೆರೆಗೆ ಸರಬರಾಜು ಆಗುವುದನ್ನು ತಡೆಯಬೇಕು. ನರೇಗಾ ಯೋಜನೆಗೆ ಕೃಷಿ ಚಟುವಟಿಕೆಗೆ ಜೋಡಣೆ ಮಾಡಬೇಕು ಎಂದು ಆಗ್ರಹಿಸಿದರು.

ಕೃಷಿ ಪಂಪ್‌ಸೆಟ್‌ಗೆ 10 ಗಂಟೆ ವಿದ್ಯುತ್ ಪೂರೈಸಬೇಕು. ತುಂಗಭದ್ರಾ ಜಲಾಶಯದ ಗೇಟ್‌ಗಳನ್ನು ಮರು ಅಳವಡಿಸಿ ಎರಡನೇ ಬೆಳೆಗೆ ನೀರನ್ನು ಒದಗಿಸಬೇಕು. ಬಳ್ಳಾರಿಯಲ್ಲಿ ಈ ವರ್ಷವೇ ಒಣ ಮೆಣಸಿನಕಾಯಿ ಮಾರುಕಟ್ಟೆ ನಿರ್ಮಿಸಿ ರೈತರಿಗೆ ಅನುಕೂಲ ಮಾಡಬೇಕು.

ಸಿರುಗುಪ್ಪ ತಾಲೂಕಿನ ಮಾಳಾಪುರ ಕೆರೆಯನ್ನು ಅಭಿವೃದ್ಧಿಪಡಿಸಬೇಕು. ಕಲ್ಲುಕಂಬ-ಮಾರುತಿ ಕ್ಯಾಂಪ್ ನಡುವಿನ ಹಿರೇಹಳ್ಳದ ನೀರನ್ನು ಕೃಷಿಗಾಗಿ ಉಪಯೋಗಿಸಲು ಯೋಜನೆ ರೂಪಿಸಬೇಕು ಎಂದು ಮಾಧವರೆಡ್ಡಿ ಒತ್ತಾಯಿಸಿದರು.